ADVERTISEMENT

‘ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ’

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 12:08 IST
Last Updated 10 ಅಕ್ಟೋಬರ್ 2020, 12:08 IST
ಆಲಮಟ್ಟಿಯ ಆರ್.ಬಿ.ಪಿ.ಜಿ. ಹಳಕಟ್ಟಿ ಪ್ರೌಢಶಾಲೆಗೆ ಭೇಟಿ ನೀಡಿದ ವಿಧಾನಪರಿಷತ್‌ ಸದಸ್ಯ ಅರುಣ ಶಹಾಪುರ ಅವರನ್ನು ಶಿಕ್ಷಕರು ಸನ್ಮಾನಿಸಿದರು
ಆಲಮಟ್ಟಿಯ ಆರ್.ಬಿ.ಪಿ.ಜಿ. ಹಳಕಟ್ಟಿ ಪ್ರೌಢಶಾಲೆಗೆ ಭೇಟಿ ನೀಡಿದ ವಿಧಾನಪರಿಷತ್‌ ಸದಸ್ಯ ಅರುಣ ಶಹಾಪುರ ಅವರನ್ನು ಶಿಕ್ಷಕರು ಸನ್ಮಾನಿಸಿದರು   

ಆಲಮಟ್ಟಿ: ‘ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೇ ಪಿಂಚಣಿ ಯೋಜನೆಯನ್ನು ರಾಜ್ಯದ ನೌಕರರಿಗೆ ಮುಂದುವರಿಸಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ ಹೇಳಿದರು.

ಇಲ್ಲಿಯ ಆರ್.ಬಿ.ಪಿ.ಜಿ. ಹಳಕಟ್ಟಿ ಪ್ರೌಢಶಾಲೆಗೆ ಶುಕ್ರವಾರ ಭೇಟಿ ನೀಡಿದ ನಂತರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಪಿಂಚಣಿ ಎಂಬುದು ನೌಕರರ ಹಕ್ಕು. ಹಳೆ ನೀತಿ ಜಾರಿಗಾಗಿ ನೌಕರರು ಹೋರಾಟ ನಡೆಸುತ್ತಿದ್ದಾರೆ. ಅದಕ್ಕೆ ಸಂಪೂರ್ಣ ಬೆಂಬಲವಿದೆ. ಈಚೆಗೆ ಕೃಷ್ಣ ಭೈರೇಗೌಡರ ಹೇಳಿಕೆ ರಾಜ್ಯದಲ್ಲಿ ನೌಕರರಲ್ಲಿ ಆತಂಕ ಮೂಡಿಸಿದೆ. ಪಿಂಚಣಿ ಇದ್ದರೆ ನೌಕರರಿಗೆ ಶಕ್ತಿ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಅನುದಾನಿತ ಸಂಸ್ಥೆಗಳಲ್ಲಿ ದುಡಿಯುತ್ತಿರುವ ನೌಕರರು, ನಿಗಮ ಮಂಡಳಿ, ಅರೆ ಸರ್ಕಾರಿ ನೌಕರರಿಗೂ ಒಪಿಎಸ್ ಜಾರಿಗೊಳಿಸಬೇಕು’ ಎಂದು ಹೇಳಿದರು.

ADVERTISEMENT

ಶಿಕ್ಷಕರಾದ ಎನ್.ಎಸ್. ಬಿರಾದಾರ, ಪಿ.ಎ. ಹೇಮಗಿರಿಮಠ, ಎಚ್.ಎನ್. ಕೆಲೂರ, ಎಸ್.ಎಚ್. ನಾಗಣಿ, ಧನಶೆಟ್ಟಿ, ಸಜ್ಜನ, ಶಿಂಧೆ, ರಾಜಕುಮಾರ ರಾಠೋಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.