ADVERTISEMENT

ವಿಜಯಪುರ ಹಾಲು ಒಕ್ಕೂಟಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 12:55 IST
Last Updated 26 ನವೆಂಬರ್ 2020, 12:55 IST
ವಿಜಯಪುರದಲ್ಲಿ ಇತ್ತೀಚೆಗೆ ನಡೆದ 67 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ  ಉತ್ತಮ ಆಡಳಿತ ಪ್ರಶಸ್ತಿಯನ್ನು ವಿಜಯಪುರ –ಬಾಗಲಕೋಟೆ ಹಾಲು ಒಕ್ಕೂಟದ ಅಧ್ಯಕ್ಷ ಸಂಭಾಜಿ ಎಸ್. ಮಿಸಾಳೆ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಸಂಜೀವ್ ದಿಕ್ಷೀತ್ ಅವರಿಗೆ  ಶಾಸಕ ಶಿವಾನಂದ ಪಾಟೀಲ ನೀಡಿ ಸನ್ಮಾನಿಸಿದರು
ವಿಜಯಪುರದಲ್ಲಿ ಇತ್ತೀಚೆಗೆ ನಡೆದ 67 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ  ಉತ್ತಮ ಆಡಳಿತ ಪ್ರಶಸ್ತಿಯನ್ನು ವಿಜಯಪುರ –ಬಾಗಲಕೋಟೆ ಹಾಲು ಒಕ್ಕೂಟದ ಅಧ್ಯಕ್ಷ ಸಂಭಾಜಿ ಎಸ್. ಮಿಸಾಳೆ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಸಂಜೀವ್ ದಿಕ್ಷೀತ್ ಅವರಿಗೆ  ಶಾಸಕ ಶಿವಾನಂದ ಪಾಟೀಲ ನೀಡಿ ಸನ್ಮಾನಿಸಿದರು   

ವಿಜಯಪುರ: ವಿಜಯಪುರ – ಬಾಗಲಕೋಟೆಜಿಲ್ಲಾ ಹಾಲು ಒಕ್ಕೂಟವು ಹಾಲು ಉತ್ಪಾದಕರಿಗೆ ಯೋಗ್ಯ ದರದಲ್ಲಿ ವರ್ಷವಿಡೀ ಮಾರುಕಟ್ಟೆಯನ್ನು ಒದಗಿಸುತ್ತಿದ್ದು, ಅವಳಿ ಜಿಲ್ಲೆಗಳಲ್ಲಿ ಸಮಗ್ರ ಹೈನುಗಾರಿಕೆ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರೂ ಆದ ಶಾಸಕ ಶಿವಾನಂದ ಪಾಟೀಲ ಹೇಳಿದರು.

ನಗರದಲ್ಲಿ ಇತ್ತೀಚೆಗೆ ನಡೆದ 67 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಒಕ್ಕೂಟಕ್ಕೆ ಉತ್ತಮ ಆಡಳಿತ ಪ್ರಶಸ್ತಿಯನ್ನುಒಕ್ಕೂಟದ ಅಧ್ಯಕ್ಷ ಸಂಭಾಜಿ ಎಸ್. ಮಿಸಾಳೆ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಸಂಜೀವ್ ದಿಕ್ಷೀತ್ ಅವರಿಗೆ ನೀಡಿ, ಸನ್ಮಾನಿಸಿ ಮಾತನಾಡಿದರು.

ಒಕ್ಕೂಟದ ಅಧ್ಯಕ್ಷ ಸಂಭಾಜಿ ಎಸ್. ಮಿಸಾಳೆ ಮಾತನಾಡಿ, ಕೆರೆ ತುಂಬುವ ಯೋಜನೆ ಮತ್ತು ಏತ ನೀರಾವರಿ ಮೂಲಕ ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ಹೆಚ್ಚಿದ್ದು, ಹೈನುಗಾರಿಕೆಗೆ ವಿಫುಲ ಅವಕಾಶಗಳಿದ್ದು, ರೈತರು ಹೈನುಗಾರಿಕೆ ಕೈಕೊಳ್ಳಬೇಕು ಎಂದರು.

ADVERTISEMENT

ಹೈನುಗಾರಿಕೆ ಕೈಗೊಳ್ಳುವವರಿಗೆ ಒಕ್ಕೂಟದಿಂದ ಅವಶ್ಯಕ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಹಾಲು ಮಹಾಮಂಡಳಿ ಮತ್ತು ಒಕ್ಕೂಟದ ನಿರ್ದೇಶಕ ಶ್ರೀಶೈಲಗೌಡ ಪಾಟೀಲ್, ಮಾಜಿ ಅಧ್ಯಕ್ಷ ಸಂಗಣ್ಣ ಹಂಡಿ, ನಿರ್ದೇಶಕರಾದ ಗುರು ಚಲುವಾದಿ, ಸಿದ್ದಣ್ಣ ಕಡಪಟ್ಟಿ, ಮಹಾದೇವ ಹನಗಂಡಿ, ಸಂಜಯ ತಳೇವಾಡ, ಈರನಗೌಡ ಕರಿಗೌಡ್ರ, ಕೃಷ್ಣಪ್ಪ ಬಿಲ್‍ಕೇರಿ, ಅಶ್ವಿನಿ ಹಳ್ಳೂರ, ಗಾಯತ್ರಿ ಆದಬಸಪ್ಪಗೋಳ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.