ADVERTISEMENT

ಶಿಕ್ಷಣ, ಅಧ್ಯಾತ್ಮ ಸಾರಿದ ಬಸವಂತರಾಯ: ಎಸ್.ಎನ್. ಮಂಗೊಂಡ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 6:22 IST
Last Updated 21 ಜುಲೈ 2025, 6:22 IST
<div class="paragraphs"><p>ತಿಕೋಟಾ ತಾಲ್ಲೂಕಿನ ಹೊನವಾಡದ ವಿದ್ಯಾ ವರ್ಧಕ ಸಂಘದ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಬಸವಂತರಾಯ ಮಹಾರಾಜರ ಜಯಂತಿ ಆಚರಿಸಲಾಯಿತು&nbsp;</p></div>

ತಿಕೋಟಾ ತಾಲ್ಲೂಕಿನ ಹೊನವಾಡದ ವಿದ್ಯಾ ವರ್ಧಕ ಸಂಘದ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಬಸವಂತರಾಯ ಮಹಾರಾಜರ ಜಯಂತಿ ಆಚರಿಸಲಾಯಿತು 

   

ತಿಕೋಟಾ: ‘ಆಧ್ಯಾತ್ಮಕವಾಗಿ ಶಿಕ್ಷಣಕ್ಕಾಗಿ ಅತೀ ಹೆಚ್ಚು ಮಹತ್ವ ನೀಡಿದಂತ ಶ್ರೇಷ್ಠ ವ್ಯಕ್ತಿ ಬಸವಂತರಾಯ ಮಹಾರಾಜರು’ ಎಂದು ನಿವೃತ್ತ ಪ್ರಾಧ್ಯಾಪಕ ಎಸ್.ಎನ್. ಮಂಗೊಂಡ ಹೇಳಿದರು.

ತಾಲ್ಲೂಕಿನ ಹೊನವಾಡದ ವಿದ್ಯಾ ವರ್ಧಕ ಸಂಘದ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಬಸವಂತರಾಯ ಮಹಾರಾಜರ 102ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ತಾರುಣ್ಯದಲ್ಲಿ ಸಾಮಾಜಿಕ ಕುಂದು ಕೊರತೆಗಳ ನಿವಾರಣೆಗಾಗಿ ಬಂಡೇಳುವ ಮೌನ ಕ್ರಾಂತಿಯ ಚಟುವಟಿಕೆಗಳನ್ನು ಅವರಲ್ಲಿ ನಮ್ಮೂರ ಜನರೊಂದಿಗೆ ನಾನು ಕಂಡಿದ್ದೆ. ಎಲ್ಲಿ ಇದ್ದರೂ ಎತ್ತ ಹೋದರೂ ಪ್ರೀತಿ ವಿಶ್ವಾಸ ಅವರ ಭಾವನೆಯನ್ನು ವ್ಯಕ್ತಪಡಿಸುವ ಆದರ್ಶ ಗುಣಗಳಿಂದಾಗಿ ಬಸವಂತರಾಯರು ಜನರ ದೃಷ್ಟಿಯಲ್ಲಿ ಸಂತರೆನಿಸಿದರು, ಶರಣರಾದರು, ಮಹಾರಾಜರೆನಿಸಿದರು’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ನ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಜಿ. ಲಕ್ಕುಂಡಿಮಠ ಮಾತನಾಡಿ, ‘ಮಹಾರಾಜರು ಒಬ್ಬ ಸಂಘ ಜೀವಿ ಆಗಿದ್ದರು. ತಮ್ಮ ಜೀವನದುದ್ದಕ್ಕೂ ಹಸನ್ಮುಖಿಗಳಾಗಿದ್ದರು. ಮಗುವಿನಂತ ಮನಸುಳ್ಳವರಾಗಿದ್ದರು. ಶ್ರೇಷ್ಠರು, ಕನಿಷ್ಠರು, ಸಣ್ಣವರು ದೊಡ್ಡವರು ಎಂಬ ತಾರತಮ್ಯ ಇರಲಿಲ್ಲ’ ಎಂದರು.

ಶಿಕ್ಷಕ ಪುರುಷೋತ್ತಮ ಮಸಳಿ ಮಾತನಾಡಿ, ‘ಸರಳತೆಯ ಸಾಕಾರ ಮೂರ್ತಿ ಸಹೃದಯ ಸಂಪನ್ನರು ವೃತ್ತಿಯಿಂದ ವರ್ತಕರಾಗಿ, ಪ್ರವೃತ್ತಿಯಿಂದ ಅಧ್ಯಾತ್ಮ ವಿಚಾರವಾದಿಗಳಾಗಿ, ಸಮಾಜ ಕಲ್ಯಾಣ ಚಿಂತಕರಾಗಿ ಎಲ್ಲರೊಂದಿಗೆ ಬೆರೆಯುವ ಸರಳ ಸ್ವಭಾವದವರು’ ಎಂದು ಬಣ್ಣಿಸಿದರು.

ನೀಲಕಂಠ ಕೋಟಿ, ಯಂಕಪ್ಪ ಉಪ್ಪಾರ, ಮಲ್ಲಪ್ಪ ಮಸಳಿ, ಕೃಷ್ಣಾಜಿ ಬೋಯಿನ, ಧರೆಪ್ಪ ಗುಗ್ಗರಿ, ಬಾಪುರಾಯ ದೇವನಾಯಕ, ತುಕಾರಾಂ ಧಡಕೆ, ರಾಜು ಪಾಟೀಲ, ಶಂಕರ ಪಡತಾರೆ, ಸಿದರಾಯ ಮಸಳಿ, ಪ್ರಾಚಾರ್ಯ ಎಂ.ಎ. ಹಿರೇಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.