ತಾಳಿಕೋಟೆ: ತಾಲ್ಲೂಕಿನ ಬೆಕಿನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ರೈತರ ಬೆಳೆ ವಿಮೆ ಮತ್ತು ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ತಾಳಿಕೋಟೆ ತಹಶೀಲ್ದಾರರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು
ಬೂದಿಹಾಳ ಏತ ನೀರಾವರಿಯಿಂದ ಬೆಕಿನಾಳ ಮತ್ತು ಅಸ್ಕಿ ಗ್ರಾಮಗಳ ಸುತ್ತಲಿರುವ ಕೆರೆಗಳಿಗೆ ನೀರು ಹರಿಸಿ ಕೆರೆಗಳನ್ನ ತುಂಬಿಸಿ ನೀರಿನ ವ್ಯವಸ್ಥೆ ಮಾಡಿಕೊಡಬೇಕಾಗಿ ಮನವಿಯಲ್ಲಿ ಕೋರಲಾಗಿದೆ.
ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಶೈಲ ವಾಲಿಕಾರ, ದೇವೇಂದ್ರಪ್ಪಗೌಡ ಪಾಟೀಲ, ಸಿದ್ರಾಮಪ್ಪಗೌಡ ಪಾಟೀಲ, ಶ್ರೀಶೈಲ ಸಜ್ಜನ, ಈರಯ್ಯ ಅಲಾಳಮಠ, ರಮೇಶಗೌಡ ವಡವಡಗಿ, ಸಿದ್ದಣ್ಣ ಸಜ್ಜನ, ಶಿವಶಂಕರಪ್ಪ ಸಜ್ಜನ, ಈರಣ್ಣ ಶಿವಶಿಂಪಿ, ಮಡಿವಾಳಪ್ಪ ಸಜ್ಜನ, ಅಪ್ಪಯ್ಯ ಕರ್ಕಳ್ಳಿ, ಮಲ್ಲಪ್ಪ ಸಜ್ಜನ ಮುಂತಾದವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.