ವಿಜಯಪುರ: ನಗರದ ಅಫಾಕ್ ಆಸ್ಪತ್ರೆ ವತಿಯಿಂದ ಶನಿವಾರ ರಕ್ತದೊತ್ತಡ ಜಾಗೃತಿಗೆ ‘ಬೀಟ್ ದಿ ಪ್ರೆಷರ್’ ಮ್ಯಾರಥಾನ್ ಜರುಗಿತು.
ಡಾ.ಸೈಯದ್ ಅಫಾಕ್ ಇನಾಮದಾರ್ ನೇತೃತ್ವದಲ್ಲಿ ನಡೆದ ಮ್ಯಾರಾಥಾನ್‌ನಲ್ಲಿ 400ಕ್ಕೂ ಹೆಚ್ಚು ಜನರು ಭಾಗವಹಿಸಿ, ಹೈ ಬಿಪಿ (ರಕ್ತದೊತ್ತಡ) ಕುರಿತು ಜಾಗೃತಿ ಮೂಡಿಸಲಾಯಿತು.
ವಿಜಯಪುರ ನಗರದ ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಮ್ಯಾರಾಥಾನ್ ಜಾಮಿಯಾ ಮಸೀದಿ (ಜಂಡಾ ಕಟ್ಟಾ) ವರೆಗೆ ನಡೆಯಿತು.
ಮ್ಯಾರಥಾನ್‌ನಲ್ಲಿ ನೋಂದಾಯಿಸಿದ್ದ ಸ್ಪರ್ಧಿಗಳಿಗೆ ಉಪಹಾರ, ಪ್ರಮಾಣ ಪತ್ರ ಹಾಗೂ ಉಚಿತ ಆರೋಗ್ಯ ತಪಾಸಣೆ ಕೈಗೊಳ್ಳಲಾಯಿತು.
ಮ್ಯಾರಥಾನ್‌ನಲ್ಲಿ ಮೊದಲ ಮೂರು ಸ್ಥಾನಗಳಿಗೆ ₹5,000, ₹2,000 ಮತ್ತು ₹1,000 ನಗದು ಬಹುಮಾನ ನೀಡಲಾಯಿತು.
ಅಡ್ವೋಕೇಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಡಿ.ಜಿ. ಬಿರಾದಾರ, ರಾಣಿಚೆನ್ನಮ್ಮ ವಿವಿಯ ಸಿಂಡಿಕೇಟ್ ಸದಸ್ಯ ರಫೀ ಭಂಡಾರಿ, ಮುನ್ನಾ ಬಕ್ಷಿಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.