
ಪ್ರಜಾವಾಣಿ ವಾರ್ತೆ
ಸಾವು (ಪ್ರಾತಿನಿಧಿಕ ಚಿತ್ರ)
ಆಲಮಟ್ಟಿ: ಹಾಸಿಗೆ ತೊಳೆಯಲು ಇಲ್ಲಿಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ (ಪಾರ್ವತಿ ಕಟ್ಟಾ ಸೇತುವೆ ಸಮೀಪ) ಇಳಿದಾಗ ಕಾಲು ಜಾರಿ ಬಿದ್ದು ಸೋಮವಾರ ನಾಪತ್ತೆಯಾಗಿದ್ದ ಬಾಲಕ ರವಿ ಮಂಜುನಾಥ ಜಗ್ಗಲ (16) ಮೃತದೇಹ ಮಂಗಳವಾರ ಪತ್ತೆಯಾಗಿದೆ.
ಕಾಲುವೆಯಲ್ಲಿ ಬಿದ್ದ ಕಾರಣ ತಕ್ಷಣವೇ ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿತ್ತು. ಬೆಳಿಗ್ಗೆ ಮೃತ ಬಾಲಕನ ಶವ ನೀರಿನಲ್ಲಿ ತೇಲುತ್ತಿತ್ತು. ಮೀನುಗಾರರು ಶವವನ್ನು ದಡಕ್ಕೆ ತಂದರು. ಮೃತರ ಸಂಬಂಧಿಗಳ ರೋಧನ ಮುಗಿಲು ಮುಟ್ಟಿತ್ತು. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.