ADVERTISEMENT

‘ಶಾಲೆ, ಪೋಷಕರಿಗೆ ಕೀರ್ತಿ ತನ್ನಿ’

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 6:05 IST
Last Updated 7 ಆಗಸ್ಟ್ 2025, 6:05 IST
ದೇವರಹಿಪ್ಪರಗಿ ಬಿಎಲ್‌ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಬಿಎಲ್‌ಡಿಇ ಸಂಸ್ಥೆಯ ಮುಖ್ಯ ಅಧಿಕ್ಷಕ ಎಸ್.ಎ. ಬಿರಾದಾರ ಉದ್ಘಾಟಿಸಿದರು
ದೇವರಹಿಪ್ಪರಗಿ ಬಿಎಲ್‌ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಬಿಎಲ್‌ಡಿಇ ಸಂಸ್ಥೆಯ ಮುಖ್ಯ ಅಧಿಕ್ಷಕ ಎಸ್.ಎ. ಬಿರಾದಾರ ಉದ್ಘಾಟಿಸಿದರು   

ದೇವರಹಿಪ್ಪರಗಿ: ‘ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಮುಂದೆ ವೈದ್ಯ, ಇಂಜಿನಿಯರ್‌ಗಳಾಗಿ ವೇದಿಕೆಯಲ್ಲಿ ಕುಳಿತು ಸನ್ಮಾನ ಸ್ವೀಕರಿಸುವಂತಾಗಲಿ’ ಎಂದು ಪದವಿಪೂರ್ವ ಉಪನಿರ್ದೇಶಕರ ಕಾರ್ಯಾಲಯದ ಶಾಖಾಧಿಕಾರಿ ಪ್ರಕಾಶ ಗೊಂಗಡಿ ಹೇಳಿದರು.

ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಕಾಲೇಜಿನಲ್ಲಿ ಶನಿವಾರ ಜರುಗಿದ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್, ಇಎಲ್‌ಸಿ ಹಾಗೂ ಪಠ್ಯಪೂರಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಮ್ಮ ಸಾಧನೆ ಪಾಲಕರು, ಶಿಕ್ಷಕರು ಸೇರಿದಂತೆ ನಾವು ಕಲಿತ ಶಿಕ್ಷಣ ಸಂಸ್ಥೆಗೆ ಗೌರವ ದೊರಕಿಸುವಂತಾಗಬೇಕು. ಆಗ ಮಾತ್ರ ಆತ್ಮತೃಪ್ತಿ, ಸಮ್ಮಾನ ದೊರೆಯಲು ಸಾಧ್ಯ’ ಎಂದರು.

ADVERTISEMENT

‘ಪಟ್ಟಣದಲ್ಲಿ ಬಿಎಲ್‌ಡಿಇ ಸಂಸ್ಥೆಯ ಹಳೇ ಪ್ರೌಢಶಾಲಾ ಆವರಣದಲ್ಲಿ ಶೀಘ್ರವೇ ಸಿಬಿಎಸ್ಇ ಶಾಲೆ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಸಂಸ್ಥೆಯ ಮುಖ್ಯ ಅಧೀಕ್ಷಕ ಎಸ್.ಎ.ಬಿರಾದಾರ (ಕನ್ನಾಳ ಗೌಡರು) ಮಾಹಿತಿ ನೀಡಿದರು.

ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಜಿ.ಬಿ.ಸಾಲಕ್ಕಿ, ಪಟ್ಟಣದಲ್ಲಿ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಬಿಎಲ್‌ಡಿಒ ಸಂಸ್ಥೆಯ ಕೈಗೊಂಡ ಕಾರ್ಯಗಳ ಕುರಿತು ಮಾತನಾಡಿದರು.

ಕ್ರೀಡಾ ಚಟುವಟಿಕೆಗಳಿಗೆ ವಾಲಿಬಾಲ್ ಸರ್ವೀಸ್ ಮಾಡುವ ಮೂಲಕ ವಿಜಯಪುರದ ಗೆಜ್ಜೆ ಕರಿಯರ್ ಅಕಾಡೆಮಿ ಅಧ್ಯಕ್ಷ ಸುರೇಶ ಗೆಜ್ಜೆ ಚಾಲನೆ ನೀಡಿದರು. ಬಸನಗೌಡ ಲಿಂಗದಳ್ಳಿ(ಚಬನೂರ) 50 ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ಬಿಡುಗಡೆಗೊಳಿಸುವುದರ ಜೊತೆಗೆ ಎನ್ಎಸ್ಎಸ್ ಘಟಕ ಉದ್ಘಾಟಿಸಿದರು. ನಂತರ ಗಣ್ಯರು ಇಎಲ್‌ಸಿಯ ಮತದಾರರ ನಮೂನೆ ನೋಂದಣಿ ಬಿಡುಗಡೆ ಮಾಡಿದರು.

ಪ್ರಾಚಾರ್ಯ ವಿ.ಜಿ.ಹೂನಳ್ಳಿ, ಮುಖ್ಯಶಿಕ್ಷಕ ವಿ.ಎಂ.ಪಾಟೀಲ, ಸ್ಥಳೀಯ ಸಲಹಾ ಸಮಿತಿ ಸದಸ್ಯರಾದ ಶರಣಪ್ಪ ಸಾಲಕ್ಕಿ, ಕಾಶೀನಾಥ ಸಾಲಕ್ಕಿ, ಸಿಬ್ಬಂದಿ ಎಸ್.ಎಂ.ಕಿಣಗಿ, ಕೆ.ವಿ.ಸಾಲಿಮಠ, ಐ.ಬಿ.ಬಿದರಿ, ವಿ.ಆರ್.ಹಿರೇಮಠ, ನವೀನಕುಮಾರ, ಬಿ.ಬಿ.ಬಿರಾದಾರ, ಸಾಹೇಬಗೌಡ ಬಿರಾದಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.