ADVERTISEMENT

ತತ್ವಾದರ್ಶಗಳಿಂದ ವಿಶ್ವ ಗೆದ್ದ ಬುದ್ಧ: ಹಾಸಿಂಪೀರ ವಾಲೀಕಾರ

​ಪ್ರಜಾವಾಣಿ ವಾರ್ತೆ
Published 26 ಮೇ 2021, 11:38 IST
Last Updated 26 ಮೇ 2021, 11:38 IST
ವಿಜಯಪುರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ವತಿಯಿಂದ ಬುದ್ಧ ಪೂರ್ಣಿಮಾ ಆಚರಿಸಲಾಯಿತು
ವಿಜಯಪುರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ವತಿಯಿಂದ ಬುದ್ಧ ಪೂರ್ಣಿಮಾ ಆಚರಿಸಲಾಯಿತು   

ವಿಜಯಪುರ: ಪ್ರಜ್ವಲ ತತ್ವಾದರ್ಶಗಳಿಂದ ಎಲ್ಲರ ಮನಸ್ಸು ಗೆದ್ದ ಬುದ್ಧ ವಿಶ್ವಕ್ಕೆ ನಿತ್ಯ ಸ್ಮರಣೀಯ ಎಂದುಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಹಮ್ಮಿಕೊಂಡಿದ್ದ ಬುದ್ಧ ಪೂರ್ಣಿಮಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿದ್ದಾರ್ಥ ತನ್ನ ಅರಸು ಮನೆತನದ ಭೋಗ-ಭಾಗ್ಯಗಳನ್ನು ತೊರೆದು ತಪಸ್ಸು ನಿರತನಾಗಿ ಜ್ಞಾನಪಡೆದು ಜಗತ್ತಿಗೆ ಮಾನವೀಯತೆಯ ಸಂದೇಶ ಸಾರಿ, ಮಾನವರನ್ನು ಮಾನವರನ್ನಾಗಿ ಕಾಣುವುದೆ ಬೌದ್ಧ ಧರ್ಮವೆಂದು ಬುದ್ಧ ಪ್ರತಿಪಾದಿಸಿದ್ದರಿಂದಬೌದ್ಧ ಧರ್ಮತತ್ವಾದರ್ಶಗಳು ವಿಶ್ವದೆಲ್ಲೆಡೆ ಹರಡಿತು ಎಂದರು.

ADVERTISEMENT

ಬುದ್ಧನ ಜನನ, ಜ್ಞಾನೋದಯ ಹಾಗು ಮಹಾಪರಿನಿರ್ವಾಣ (ಮರಣ) ಮೂರೂ ವೈಶಾಖ ಹುಣ್ಣಿಮೆಯ ದಿನವಾಗಿದ್ದರಿಂದ ಬುದ್ಧ ಪೂರ್ಣಿ‌‌‌‌ಮಾ ಆಚರಣೆಗೆ ಮಹತ್ವವಿದೆ ಎಂದರು.

ಪತ್ರಕರ್ತ ಅಲ್ಲಮಪ್ರಭು ಮಲ್ಲಿಕಾರ್ಜುನಮಠ ಮಾತನಾಡಿ, ಜಗತ್ತಿನ ಕರಾಳ ಕಷ್ಟ ಜೀವನ ಸಿದ್ದಾರ್ಥನ ಮೇಲೆ ಪರಿಣಾಮ ಬೀರಿದ ಪರಿಣಾಮ ಸಿದ್ಧಾರ್ಥ ಬುದ್ಧನಾದ ಎಂದರು.

ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಘಾಟಗೆ, ಆನಂದ ರೆಡ್ಡಿ. ಖಾದರ್‌ ಬಾಷಾ ಬನ್ನಿಹಟ್ಟಿ, ಸಂಜಯ ಕರಾಬಿ ಉಪಸ್ಥಿತರಿದ್ದರು.

ವಿಶೇಷ ಪ್ರಾರ್ಥನೆ: ಜಲನಗರದಲ್ಲಿರುವ ಬುದ್ಧವಿಹಾರದಲ್ಲಿ ಚೆಗುವೆರಾ ಯೂಥ್ ಫೆಡರೇಶನ್ ಸಂಘಟನೆಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಬುದ್ಧ ಪೂರ್ಣಿಮೆ ಆಚರಿಸಲಾಯಿತು.

ಜಗತ್ತು ಆದಷ್ಟು ಬೇಗನೇ ಕೊರೊನಾದಿಂದ ಮುಕ್ತವಾಗುವಂತೆ ಬುದ್ಧ ಕರುಣಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ಸಂಘಟನೆಯ ಅಧ್ಯಕ್ಷ ಮಂಜುನಾಥ ಎಸ್.ಕಟ್ಟಿಮನಿ ಮಾತನಾಡಿ, ಬುದ್ಧ ತೋರಿದ ಪ್ರೀತಿ, ಮೈತ್ರಿ ಹಾಗೂ ಕಾರುಣ್ಯದ ಮಾರ್ಗದಲ್ಲಿ ನಾವೆಲ್ಲರೂನಡೆಯಬೇಕು ಎಂದು ಹೇಳಿದರು.

ಮುಖಂಡರಾದ ಕೆ.ಎಸ್. ಗಂಜಿ, ಅನೀಲ್ ಸಿಂಗೆ, ಸಂಜು ಎಸ್.ಕಟ್ಟಿಮನಿ, ಶ್ರೀಧರ್ ಎಸ್.ಕಟ್ಟಿಮನಿ, ವಿಕ್ರಮಾದಿತ್ಯ ಗಳವೆ, ರಾಮು ಎಸ್.ಕಟ್ಟಿಮನಿ, ಯುವ ಮುಖಂಡರಾದ ಶ್ರೀನಾಥ ಪೂಜಾರಿ, ಸುನೀಲ ಸೂರ್ಯವಂಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.