ADVERTISEMENT

ಸ್ವಚ್ಛತಾ ಆಂದೋಲನಕ್ಕೆ ಸಹಕರಿಸಿ: ಫಿರೋಜ್ ಮುಲ್ಲಾ ಮನವಿ

ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ ಮನವಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 15:33 IST
Last Updated 10 ಜೂನ್ 2025, 15:33 IST
ತಾಳಿಕೋಟೆಯ ವಾರ್ಡ್ 5ರಲ್ಲಿರುವ ಉದ್ಯಾನದಲ್ಲಿ ಮಂಗಳವಾರ ಸ್ವಚ್ಛತಾ ಆಂದೋಲನ ಜರುಗಿತು
ತಾಳಿಕೋಟೆಯ ವಾರ್ಡ್ 5ರಲ್ಲಿರುವ ಉದ್ಯಾನದಲ್ಲಿ ಮಂಗಳವಾರ ಸ್ವಚ್ಛತಾ ಆಂದೋಲನ ಜರುಗಿತು   

ತಾಳಿಕೋಟೆ: ‘ಮನೆ ಮುಂದೆ ನೀರು ನಿಲ್ಲದಂತೆ ನೋಡಿಕೊಳ್ಳಿ. ಇದರಿಂದ ಮಲೇರಿಯ, ಡೆಂಗಿಯಂತಹ ಸಾಂಕ್ರಾಮಿಕ ರೋಗ ಹರಡುತ್ತದೆ’ ಎಂದು ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ ಹೇಳಿದರು.

ಪಟ್ಟಣದ ವಾರ್ಡ್ 5ರಲ್ಲಿರುವ ಉದ್ಯಾನದಲ್ಲಿ ಮಂಗಳವಾರ ನಡೆದ ಸ್ವಚ್ಛತಾ ಆಂದೋಲನದಲ್ಲಿ ಮಾತನಾಡಿದರು.

‘ಪುರಸಭೆಯ ಕಸ ವಿಲೇವಾರಿ ವಾಹನಗಳಿಗೆ ಒಣ ತ್ಯಾಜ್ಯ, ಹಸಿ ತ್ಯಾಜ್ಯವನ್ನು ಬೇರ್ಪಡಿಸಿ ಹಾಕಬೇಕು. ಕಸವನ್ನು ಚರಂಡಿಗೆ ಸುರಿಯಬಾರದು. ಪುರಸಭೆಯ ಸ್ವಚ್ಛತಾ ಆಂದೋಲನಕ್ಕೆ ಪಟ್ಟಣದ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದರು.

ADVERTISEMENT

ಉದ್ಯಾನದ ಬಾಗಿಲ ಬಳಿ ಕಸ ಹಾಕಿದರೆ ₹500 ದಂಡ ವಿಧಿಸಲಾಗುವುದು ಎಂಬ ಎಚ್ಚರಿಕೆ ಫಲಕ ಅಳವಡಿಸಲಾಯಿತು. 

ಮುಖ್ಯಾಧಿಕಾರಿ ಮೋಹನ ಜಾಧವ, ಹಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ, ಕಿರಿಯ ಆರೋಗ್ಯ ನಿರೀಕ್ಷಕರಾದ ರಂಗನಾಥ ಅಜಮನಿ, ಶಿವಾನಂದ ಜುಮನಾಳ, ಸ್ವಚ್ಛತಾ ಕಾರ್ಮಿಕರಾದ ನಿಜಲಿಂಗಪ್ಪ ಬಸರಿಕಟ್ಟಿ, ಸುರೇಶ್ ಕಟ್ಟಿಮನಿ, ಆನಂದ ಚಲವಾದಿ, ಚಂದಪ್ಪ ಡೊನೂರ, ಬಸವರಾಜ ರಕ್ಕಸಗಿ , ಪರಶುರಾಮ ಕಟ್ಟಿಮನಿ, ಪರಶುರಾಮ ರಜಪೂತ್, ಆಕಾಶ ಕಟ್ಟಿಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.