ವಿಜಯಪುರ: ಸಹಕಾರ ರಂಗದ ಏಳಿಗೆಯಲ್ಲಿ ಸಹಕಾರಿ ಸಂಘಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಬಾಲಗಾಂವ ಗುರುದೇವ ಆಶ್ರಮದ ಅಮೃತಾನಂದ ಶ್ರೀಗಳು ಹೇಳಿದರು.
ತಾಲ್ಲೂಕಿನ ಶಿವಣಗಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಬಹುಉದ್ದೇಶ ಸೇವಾಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮದ ಸರ್ವರ ಸಹಕಾರದಿಂದ ಈ ಸಹಕಾರಿ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ನಾಗಠಾಣ ಕ್ಷೇತ್ರದ ಶಾಸಕ ವಿಟ್ಠಲ ಕಟಕದೊಂಡ ಮಾತನಾಡಿ, ರೈತಸ್ನೇಹಿಯಾಗಿ ಕೃಷಿ ಪತ್ತಿನ ಸಹಕಾರಿ ಸಂಘಗಳು ಕಾರ್ಯನಿರ್ವಹಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಈ ಬ್ಯಾಂಕ್ ನಾಡಿನ ಪ್ರಮುಖ ರೈತಸ್ನೇಹಿ ಬ್ಯಾಂಕ್ ಆಗಿ ಹೆಸರಾಗಲಿ ಎಂದು ಹಾರೈಸಿದರು.
ಡಿಸಿಸಿ ಬ್ಯಾಂಕಿನ ನಿವೃತ್ತ ಅಧಿಕಾರಿ ಆರ್.ಎಂ. ಬಣಕಾರ, ವೃಷಭಲಿಂಗೇಶ್ವರ ಸ್ವಾಮೀಜಿ, ಸಿದ್ದಲಿಂಗ ಶಿವಾಚಾರ್ಯ, ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಕುದುರಿ ಸಾಲವಾಡಗಿ, ವಿಜಯಪುರದ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ಸತೀಶ ಪಾಟೀಲ, ರವಿ ಜೇವರಗಿ, ವೈ.ಎಸ್.ಕಂಬಾರ, ಡಿ.ಸಿ. ಬಿರಾದಾರ, ಎಸ್.ಎಸ್. ರೆಡ್ಡಿ, ಜೆ.ಕೆ.ಕೊರಬು, ಬಿ.ಎ.ಹೆಬ್ಬಾಳ, ಪಿ.ಎಂ.ದೊಡಮನಿ, ಶ್ರೀಶೈಲ ಹದರಿ, ವಿರುಪಾಕ್ಷಿ ರೋಡಗಿ, ಪಿ.ಕೆ. ಸುಬಾನಪ್ಪಗೋಳ, ಆರ್.ವಿ.ಗುಣದಾಳಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.