ADVERTISEMENT

ಕಾಂಗ್ರೆಸ್‌ ‘ಆರೋಗ್ಯ ಹಸ್ತ’ಕ್ಕೆ ಚಾಲನೆ

ವಾರಿಯರ್ಸ್‌ಗಳಿಗೆ ತಜ್ಞ ವೈದ್ಯರಿಂದ ತರಬೇತಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2020, 10:13 IST
Last Updated 29 ಆಗಸ್ಟ್ 2020, 10:13 IST
ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ‘ಆರೋಗ್ಯ ಹಸ್ತ’ ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ರಾಜು ಅಲಗೂರ ಮಾತನಾಡಿದರು
ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ‘ಆರೋಗ್ಯ ಹಸ್ತ’ ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ರಾಜು ಅಲಗೂರ ಮಾತನಾಡಿದರು   

ವಿಜಯಪುರ: ನಗರ ಮತ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಹಮ್ಮಿಕೊಂಡಿರುವ ‘ಆರೋಗ್ಯ ಹಸ್ತ’ಕಾರ್ಯಕ್ರಮಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಶಾಕೀರ್‌ ಸನದಿ ಶನಿವಾರ ಚಾಲನೆ ನೀಡಿದರು.

ನಗರದ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾದಿಂದ ಬಳಲುತ್ತಿರುವಜನರಿಗೆ ನೆರವಾಗಲು ಹಾಗೂ ಈ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಕ್ಷವು ಆರೋಗ್ಯ ಹಸ್ತ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ರಾಜು ಆಲಗೂರ ಮಾತನಾಡಿ,ಕಾಂಗ್ರೆಸ್‌ ಪಕ್ಷ ತನ್ನ ಕಾರ್ಯಕರ್ತರ ಪಡೆಯೊಂದಿಗೆ ಆರೋಗ್ಯ ಹಸ್ತ ಕಾರ್ಯಕ್ರಮ ಜಾರಿಗೆ ತಂದಿದ್ದು, ಸಾಮಾನ್ಯ ಜನರಿಗೆ ತುಂಬಾ ಸಹಕಾರಿಯಾಗಲಿದೆ ಎಂದರು.

ADVERTISEMENT

ಈ ಕಾರ್ಯಕ್ರಮದ ಮೂಲಕ ರೋಗಿಗಳ ಹತ್ತಿರ ಪಕ್ಷದ ಕಾರ್ಯಕರ್ತರು ತಲುಪಲು ಸಹಕಾರಿಯಾಗಲಿದೆ. ಎಲ್ಲರೂ ಕೈಜೋಡಿಸಿದರೆ ಜನರ ಪ್ರಾಣ ಉಳಿಸಬಹುದು. ಜನ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ವೈದ್ಯ ಡಾ.ರೇಹಾನ್‌ ಬಾಂಗಿ ಅವರು ಜನರ ಆರೋಗ್ಯ ತಪಾಸಣೆ ಹೇಗೆ ಕೈಗೊಳ್ಳಬೇಕು ಎಂಬುದರ ಕುರಿತು ಪಕ್ಷದ ಆರೋಗ್ಯ ಹಸ್ತ ವಾರಿಯರ್ಸ್‌ಗಳಿಗೆ ತರಬೇತಿ ನೀಡಿದರು.

ಕೋವಿಡ್‌ಗೆ ಯಾರೊಬ್ಬರೂಅಂಜಬೇಕಾಗಿಲ್ಲ. ಆದರೆ, ಮಾಸ್ಕ್‌ ಧರಿಸಬೇಕು, ಪರಸ್ಪರ ಅಂತರ ಕಾಯ್ದುಕೊಳ್ಳುವಮುಖಾಂತರ ಈ ರೋಗವನ್ನು ತಡೆಗಟ್ಟಬಹುದು. ಒಂದು ವೇಳೆ ಈ ರೋಗ ಲಕ್ಷಣ ಕಂಡುಬಂದರೆತಡಮಾಡದೇ ಸ್ಥಳೀಯ ವೈದ್ಯರಿಗೆ ಸಂಪರ್ಸಿಕಿಸಿ ಮೊದಲನೇ ಹಂತದಲ್ಲಿಯೇ ಈ ರೋಗವನ್ನು ಹೊಡೆದೊಡಿಸಬಹುದು ಎಂದರು.

ಕೆಲವರು ವೈದ್ಯರನ್ನು ಸಂಪರ್ಕಿಸದೇ ಮನೆಯಲ್ಲಿಯೇ ಕುಳಿತು ತಮಗೆ ಬೇಕಾದಂತಹ ಉಪಚಾರ ಮಾಡಿಕೊಂಡು ಈ ರೋಗಉಲ್ಬಣ ಮಾಡಿಕೊಂಡು ಇಂದು ಸಾವಿಗೀಡಾಗುತ್ತಿದ್ದಾರೆ ಇದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಹೇಳಿದರು.

ವಿಜಯಪುರ ನಗರ ಕಾಂಗ್ರೆಸ್‌ ಮುಖಂಡ ಅಬ್ದುಲ್‌ಹಮೀದ್‌ ಮುಶ್ರೀಪ್, ಜಿಲ್ಲಾ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ಡಾ.ಪಟ್ಟಣಶೆಟ್ಟಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶಿವಾನಂದ ಬೆಂಟನೂರ್‌, ವಿಜಯಪುರ ನಗರ ಬ್ಲಾಕ್‌ ಅಧ್ಯಕ್ಷಜಮೀರ್‌ ಅಹ್ಮದ್‌ ಬಕ್ಷೀ, ಜಲನಗರ ಬ್ಲಾಕ್‌ ಅಧ್ಯಕ್ಷೆ ಆರತಿ ಶಹಾಪೂರ, ಜಿಲ್ಲಾ ಮಹಿಳಾ ಅಧ್ಯಕ್ಷೆವಿದ್ಯಾರಾಣಿ ತುಂಗಳ, ಜಿಲ್ಲಾ ಯುವ ಅಧ್ಯಕ್ಷ ಅಬ್ದುಲ್‌ಖಾದರ್‌ ಖಾದಿಮ್‌,ಮಲ್ಲಣಗೌಡ ಬಿರಾದಾರ, ಶಹಜಹಾನ್‌ ದುಂಡಸಿ, ವಿನೋದ ವ್ಯಾಸ, ಸುರೇಶ ಘೋಣಸಗಿ, ವಸಂತ ಹೊನಮೊಡೆ, ಶಬ್ಬೀರ ಜಾಗೀರದಾರ, ವಿಜಯಕುಮಾರ ಘಾಟಗೆ, ಅನ್ವರ ಜಮಾದಾರ, ರುಕ್ಮೀಣಿ ಚವ್ಹಾಣ,ಮಂಜುಳಾ ಜಾಧವ, ಆಯಿಶಾ ಬೇಪಾರಿ ಇದ್ದರು.

ಆರೋಗ್ಯ ಹಸ್ತ ವಾರಿಯರ್ಸ್‌ ಮನೆ-ಮನೆಗೆ ತೆರಳಿಜನರ ಆರೋಗ್ಯ ತಪಾಸಣೆ ಮಾಡುವ ಮೂಲಕ ಮೊದಲನೇ ಹಂತದಲ್ಲಿಯೇ ಈ ರೋಗ ನಿಯಂತ್ರಿಸಲು ನೆರವಾಗಬೇಕು
-ರಾಜು ಆಲಗೂರ ಅಧ್ಯಕ್ಷ, ಕಾಂಗ್ರೆಸ್‌ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.