ADVERTISEMENT

ಪಾಲಿಕೆ: ಮೂರು ವಲಯ ಕಚೇರಿ ಶೀಘ್ರ ಆರಂಭ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 12:39 IST
Last Updated 17 ಆಗಸ್ಟ್ 2022, 12:39 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ: ಸಾರ್ವಜನಿಕರ ಕೆಲಸ, ಕಾರ್ಯಗಳಿಗೆ ಅನುಕೂಲವಾಗಿಸುವ ಉದ್ದೇಶದಿಂದ ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂರು ವಲಯ ಕಚೇರಿ ಆರಂಭಿಸಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.

35 ವಾರ್ಡ್‌ಗಳನ್ನು ಒಳಗೊಂಡಿರುವ ಹಾಗೂ ಜಲನಗರನಲ್ಲಿ ಮುಖ್ಯ ಕಚೇರಿ ಇರುವಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಿಸುವ ಉದ್ದೇಶದಿಂದ ಈ ಕೆಳಕಂಡಂತೆ 3 ವಲಯ ಕಚೇರಿಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.

ವಲಯ ಕಚೇರಿ 1: ಗಾಂಧಿಚೌಕ ವಾರ್ಡ್‌. ನಂ.1 ರಿಂದ 11 ರ ವರೆಗೆ ಹಾಗೂ ವಾರ್ಡ್‌ ನಂ.27, 31, 32.

ADVERTISEMENT

ವಲಯ ಕಚೇರಿ 2: ಬಡಿಕಮಾನ್‌ ರೋಡ್‌ ನಗರ ನೀರು ಸರಬರಾಜು ಕಾರ್ಯಾಲಯ. ವಾರ್ಡ್‌ ನಂ.12 ರಿಂದ 20 ರ ವರೆಗೆ ಹಾಗೂ 24 ರಿಂದ 26 ರ ವರೆಗೆ.

ವಲಯ ಕಚೇರಿ 3: ಜಲನಗರ ಮುಖ್ಯ ಕಚೇರಿಯಲ್ಲಿ ವಾರ್ಡ್‌ ನಂ.21 ರಿಂದ 23 ಮತ್ತು 28 ರಿಂದ 30 ಮತ್ತು 33 ರಿಂದ 35 ರ ವರೆಗೆ.

ಶೀಘ್ರದಲ್ಲಿ ಸಾರ್ವಜನಿಕರ ಕುಂದು ಕೊರತೆ ಹಾಗೂ ಸೇವೆಗಳಿಗೆ ವಲಯ ಕಚೇರಿಗಳನ್ನು ಲೋಕಾರ್ಪಣೆಗೊಳಿಸಲಾಗುವುದು. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.