ADVERTISEMENT

ನಾಡ ಪಿಸ್ತೂಲ್‌, ಜೀವಂತ ಗುಂಡು ವಶ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 11:29 IST
Last Updated 5 ನವೆಂಬರ್ 2020, 11:29 IST

ವಿಜಯಪುರ: ನಗರದ ರಿಂಗ್‌ ರೋಡ್‌ನಜಮಖಂಡಿ ನಾಕಾ ಬಳಿ ಬುಧವಾರ ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ ಒಂದು ನಾಡ ಪಿಸ್ತೂಲ್‌, ಒಂದು ಜೀವಂತ ಗುಂಡು ಹಾಗೂ ಎರಡು ಕಬ್ಬಿಣದ ಮಚ್ಚುಗಳನ್ನು ಗಾಂಧಿಚೌಕ ಠಾಣೆ ಪಿಎಸ್‌ಐ ಶರಣಗೌಡ ಬಿ. ಗೌಡರ ವಶಪಡಿಸಿಕೊಂಡಿದ್ದಾರೆ.

ಯಾದಗಿರಿ ಜಿಲ್ಲೆ ಯಾಳಗಿ ಗ್ರಾಮದ ರಾಮರೆಡ್ಡಿ ಮಾಲಿಪಾಟೀಲ, ಬೆಂಗಳೂರಿನ ಶ್ರೀರಾಮಪುರಂದಸುರೇಶ ತುಂಗರಾಜ ಮತ್ತು ವಿನೋದ ರಾಜಾ ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳು ಯಾವುದೇ ಲೈಸನ್ಸ್‌ ಇಲ್ಲದೇ ನಾಡ ಪಿಸ್ತೂಲ್‌ ಇಟ್ಟುಕೊಂಡು ಬೈಕ್‌ನಲ್ಲಿ ಹೋಗುತ್ತಿದ್ದಾಗ ತಪಾಸಣೆ ವೇಳೆ ಪತ್ತೆಯಾಗಿದೆ. ವೈಯಕ್ತಿ ರಕ್ಷಣೆ ಸಲುವಾಗಿ ತಮ್ಮ ಬಳಿ ಇಟ್ಟುಕೊಂಡಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.