ADVERTISEMENT

ಗ್ರಾಮಾಭಿವೃದ್ದಿಯಿಂದ ದೇಶದ ಪ್ರಗತಿ: ಯಶವಂತರಾಯಗೌಡ

ಝಳಕಿ ಗ್ರಾ.ಪಂ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿದ ಶಾಸಕ ಯಶವಂತರಾಯಗೌಡ ಪಾಟೀಲ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 14:49 IST
Last Updated 11 ಮಾರ್ಚ್ 2023, 14:49 IST
ಹೊರ್ತಿ ಸಮೀಪದ ಝಳಕಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ನಿರ್ಮಿಸಲಾದ ಝಳಕಿ ನೂತನ ಗ್ರಾ.ಪಂ ಗ್ರಾಮ ಸೌಧದ ಕಟ್ಟಡವನ್ನು ಶನಿವಾರ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಉದ್ಘಾಟಿಸಿದರು. ಗ್ರಾ.ಪಂ. ಅಧ್ಯಕ್ಷ ಸಣ್ಣಪ್ಪ ತಳವಾರ, ತದ್ದೇವಾಡಿಯ ಮಹಾಂತೇಶ ಶಾಸ್ತ್ರಿಗಳು, ಶ್ರೀಮಂತ ಕಾಪ್ಸೆ, ಸಣ್ಣಪ್ಫಣ್ಣ ತಳವಾರ, ಶೇಖರ ನಾಯಕ, ಶ್ರೀಶೈಲ ಬನಸೋಡೆ, ಇಂಡಿ ತಾಪಂ ಇಒ ಸುನೀಲ ಮದ್ದಿನ, ಎಇಇ ಚಿದಾನಂದ ಮಿಂಚನಾಳ, ಚಡಚಣ ತಾ.ಪಂ ಇಒ ಸಂಜಯ ಖಡಗೇಕರ ಇದ್ದಾರೆ
ಹೊರ್ತಿ ಸಮೀಪದ ಝಳಕಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ನಿರ್ಮಿಸಲಾದ ಝಳಕಿ ನೂತನ ಗ್ರಾ.ಪಂ ಗ್ರಾಮ ಸೌಧದ ಕಟ್ಟಡವನ್ನು ಶನಿವಾರ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಉದ್ಘಾಟಿಸಿದರು. ಗ್ರಾ.ಪಂ. ಅಧ್ಯಕ್ಷ ಸಣ್ಣಪ್ಪ ತಳವಾರ, ತದ್ದೇವಾಡಿಯ ಮಹಾಂತೇಶ ಶಾಸ್ತ್ರಿಗಳು, ಶ್ರೀಮಂತ ಕಾಪ್ಸೆ, ಸಣ್ಣಪ್ಫಣ್ಣ ತಳವಾರ, ಶೇಖರ ನಾಯಕ, ಶ್ರೀಶೈಲ ಬನಸೋಡೆ, ಇಂಡಿ ತಾಪಂ ಇಒ ಸುನೀಲ ಮದ್ದಿನ, ಎಇಇ ಚಿದಾನಂದ ಮಿಂಚನಾಳ, ಚಡಚಣ ತಾ.ಪಂ ಇಒ ಸಂಜಯ ಖಡಗೇಕರ ಇದ್ದಾರೆ   

ಹೊರ್ತಿ: 'ಗ್ರಾಮಗಳ ಅಭಿವೃದ್ದಿಯಿಂದ ದೇಶ ಪ್ರಗತಿ ಹೊಂದಲು ಸಾಧ್ಯ' ಎಂದು ಶಾಸಕ ಯಶವಂತರಾಯಗೌಡ ವಿ. ಪಾಟೀಲ ಹೇಳಿದರು.

ಸಮೀಪದ ಝಳಕಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ನಿರ್ಮಿಸಲಾದ ಝಳಕಿ ನೂತನ ಗ್ರಾ.ಪಂ. ಗ್ರಾಮ ಸೌಧದ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಗ್ರಾಮ ಪಂಚಾಯ್ತಿ ಜನಪ್ರತಿನಿಧಿಗಳು ಸರ್ಕಾರದಿಂದ ಬಂದಿರುವ ಎಲ್ಲ ಸೌಲಭ್ಯಗಳನ್ನು ಬಡಜನರನ್ನು ಗುರುತಿಸಿ ಅವರಿಗೆ ತಲುಪಿಸುವ ಕೆಲಸ ಮಾಡಬೇಕು ಅಂದಾಗ ಮಾತ್ರ ಮತ್ತೇ ನೀವು ತಾ.ಪಂ ಹಾಗೂ ಜಿ.ಪಂ ಜನಪ್ರತಿನಿಧಿಯ ನಾಯಕರಾಗಲೂ ಸಾಧ್ಯವಾಗುತ್ತದೆ ಎಂದರು.

ADVERTISEMENT

ತದ್ಧೇವಾಡಿಯ ಸಂಸ್ಥಾನ ಹಿರೇಮಠದ ಮಹಾಂತೇಶ ಶಾಸ್ತ್ರಿಜಿ ಮಾತನಾಡಿ, ಜನಪ್ರತಿನಿಧಿಗಳಾದವರು ಬಡಜನರಿಗೆ ಸರ್ಕಾರದಿಂದ ಬಂದಿರುವ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುವ ಕೆಲಸ ಮಾಡಬೇಕು. ಅಂದಾಗ ಮಾತ್ರ ಈಗ ಪಡೆದಿರುವ ಕುರ್ಚಿ ಮತ್ತೇ ನಿಮಗೆ ಸಿಗುತ್ತದೆ, ಇಲ್ಲವಾದರೇ ಬೇರೆಯವರ ಪಾಲಾಗುತ್ತದೆ ಇದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

ಗ್ರಾ.ಪಂ.ಅಧ್ಯಕ್ಷ ಸಣ್ಣಪ್ಫ ತಳವಾರ ಮಾತನಾಡಿ, ಈ ಗ್ರಾಮ ಪಂಚಾಯ್ತಿ ನೂತನ ಕಟ್ಟಡವಾಗಲೂ ನಮ್ಮ ಗ್ರಾಪಂ ಪಿಡಿಒ ಹಾಗೂ ಎಲ್ಲ ಸದಸ್ಯರ ಸಹಕಾರ ಮತ್ತು ಶಾಸಕ ಯಶವಂತರಾಯಗೌಡ ಪಾಟೀಲ ಅವರ ಪ್ರಮುಖ ಸಹಕಾರವು ಕೂಡಾ ಮುಖ್ಯ ಕಾರಣವಾಗಿದೆ ಎಂದರು.

ಗ್ರಾ.ಪಂ ಮಾಜಿ ಅಧ್ಯಕ್ಷ ಶ್ರೀಮಂತ ಕಾಪ್ಸೆ ಹಾಗೂ ಸಣ್ಣಪ್ಫಣ್ಣ ತಳವಾರ ಮಾತನಾಡಿ, ಶಾಸಕರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಯಾರು ಅಭಿವೃದ್ಧಿ ಕೆಲಸ ಮಾಡುತ್ತಾರೆ, ಅಂತವರಿಗೆ ಮತ್ತೇ ಜನತೆಯ ಆರ್ಶೀವಾದವು ಅವರ ಮೇಲಿರುತ್ತದೆ ಎಂದರು.

ಚಡಚಣ ತಾ.ಪಂ ಇಒ ಸಂಜಯ ಖಡಗೇಕರ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮಗಳಲ್ಲಿ ಗ್ರಾ.ಪಂ ಜನಪ್ರತಿನಿಧಿಗಳ ಸಹಕಾರ ಮತ್ತು ಇಚ್ಚಾಶಕ್ತಿಯೊಂದಿಗೆ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಸಂತೆ ಕಟ್ಟೆ, ಉದ್ಯಾನವನ ಸೇರಿದಂತೆ ಮುಂತಾದ ಮೂಲಸೌಕರ್ಯಗಳ ಕಾರ್ಯಗಳಿಗೆ ಹೆಚ್ಚಿನ ಆಧ್ಯತೆ ನೀಡಿ ಕಾರ್ಯ ಪ್ರವರ್ತರಾಗಿದ್ಧೇವೆ ಎಂದು ಹೇಳಿದರು.

ಗ್ರಾ.ಪಂ ಉಪಾಧ್ಯಕ್ಷೆ ಸವಿತಾ ಬಸಗೊಂಡ ಪಾಟೀಲ, ಪಿಡಿಒ ಜಬ್ಬಾರ ಅಲಿ ಹಳ್ಳಿ, ಮಾಜಿ ಅಧ್ಯಕ್ಷ ಶ್ರೀಶೈಲ ಬನಸೋಡೆ, ತಾ.ಪಂ. ಮಾಜಿ ಅಧ್ಯಕ್ಷ ಶೇಖರ ನಾಯಕ, ಇಂಡಿ ತಾ.ಪಂ. ಇಒ ಸುನೀಲ ಮದ್ದಿನ, ಎಇಇ ಚಿದಾನಂದ ಮಿಂಚನಾಳ, ಎಇಇ ಎಸ್ ಆರ್‌.ರುದ್ರವಾಡಿ, ಭೀಮಪ್ಪ ಕೆ.ಲಾಳಿ, ಸಂಜೀವಕುಮಾರ ಬಿರಾದಾರ ಹಾಗೂ ಗ್ರಾ.ಪಂ.ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.