ADVERTISEMENT

ಸಿಬಿಐ ಅಧಿಕಾರಿಗಳ ಸೋಗಿನಲ್ಲಿ 35 ಗ್ರಾಂ ಚಿನ್ನಾಭರಣ ದೋಚಿದ ಖದೀಮರು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 14:32 IST
Last Updated 14 ಏಪ್ರಿಲ್ 2025, 14:32 IST

ನಾಲತವಾಡ: ಪಟ್ಟಣದಲ್ಲಿ ಸೋಮವಾರ ಬೆಳಿಗ್ಗೆ ವೃದ್ಧರೊಬ್ಬರ 35 ಗ್ರಾಂ ಬಂಗಾರವನ್ನು ಖದೀಮರು ದೋಚಿದ್ದಾರೆ.

ಸಂತೆ ಮಾಡಿಕೊಂಡು ಹೋಗಲು ಬಜಾರಿಗೆ ಬಂದ 8ನೇ ವಾರ್ಡ್ ನಿವಾಸಿ ಮೂಲಚಂದ ಸಿ. ಕ್ಷತ್ರಿ ಅವರ ಬಳಿ ಇದ್ದ 35 ಗ್ರಾಂ ತೂಕದ ಚೈನ್ ಮತ್ತು ಉಂಗುರವನ್ನು ಬೈಕ್‌ನಲ್ಲಿ ಬಂದ ಇಬ್ಬರು ಕದ್ದು ಪರಾರಿ ಆಗಿದ್ದಾರೆ.

ಬಸ್ ನಿಲ್ದಾಣದ ಎದುರು ಕೈಚೀಲ ಹಿಡಿದು ಸಂತೆಗೆ ಹೋಗುತಿದ್ದಾಗ ಬೈಕ್‌ನಲ್ಲಿ ಬಂದ ಅಪರಿಚಿತರು, ‘ನಾವು ಸಿ.ಬಿ.ಐ ಅಧಿಕಾರಿಗಳು. ಅನ್ಯ ರಾಜ್ಯದ ಕಳ್ಳರ ಗ್ಯಾಂಗ್ ನಾಲತವಾಡಕ್ಕೆ ಬಂದಿದೆ. ಚಿನ್ನ ಹಾಕಿಕೊಂಡವರಿಗೆ ಚಾಕು ತೋರಿಸಿ ಚಿನ್ನ ದೋಚಿ ಪರಾರಿಯಾಗುತ್ತಿದ್ದಾರೆ. ನೀವು ಮೈಮೇಲೆ ಬಂಗಾರ ಹಾಕಿಕೊಳ್ಳಬೇಡಿ’ ಎಂದು ನಂಬಿಸಿ, ಬಂಗಾರದ ಚೈನ್ ಹಾಗೂ ಉಂಗುರವನ್ನು ಬಿಚ್ಚಿಸಿದ್ದಾರೆ.

ADVERTISEMENT

ವೃದ್ಧ ಬಂಗಾರ ಬಿಚ್ಚಿದ ನಂತರ ಪೇಪರ್‌ನಲ್ಲಿ ಕಟ್ಟಿ ವೃದ್ಧನ ಚೀಲದಲ್ಲಿ ಇಟ್ಟಂತೆ ಮಾಡಿ, ತಮ್ಮಲ್ಲಿ ಇದ್ದ ಅಂತಹದ್ದೇ ಚೀಟಿಯನ್ನು ಚೀಲದಲ್ಲಿಟ್ಟು ಪರಾರಿಯಾಗಿದ್ದಾರೆ. ಸ್ವಲ್ಪ ದೂರು ಹೋದ ನಂತರ ವೃದ್ದನಿಗೆ ಸಂಶಯ ಬಂದಾಗ ಕೈಚೀಲದಲ್ಲಿದ್ದ ಹಾಳೆಯನ್ನು ತೆಗೆದು ನೋಡಿದಾಗ ಅದರಲ್ಲಿ ಮಣ್ಣು ಮಾತ್ರ ಇತ್ತು.

ಹೋರಠಾಣೆಯಲ್ಲಿ ವೃದ್ಧ ದೂರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.