ಆಲಮಟ್ಟಿ: ಆಲಮಟ್ಟಿ ಜಲಾಶಯಕ್ಕೆ ಹತ್ತಿಕೊಂಡಿರುವ ಗ್ಯಾಲರಿ ಬಳಿ ಶುಕ್ರವಾರ ನಸುಕಿನ ಜಾವ ಕಂಡಿದ್ದ 5 ಅಡಿ ಉದ್ದದ ಮೊಸಳೆಯನ್ನು ಪ್ರಾದೇಶಿಕ ಅರಣ್ಯ ಇಲಾಖೆಯ ಮೊಸಳೆ ರಕ್ಷಕರು ಹಿಡಿದು ಕೃಷ್ಣಾ ನದಿಗೆ ಬಿಟ್ಟರು.
ಶುಕ್ರವಾರ ನಸುಕಿನ ಜಾವ ಕೆಎಸ್‌ಐಎಸ್‌ಎಫ್ ಪೊಲೀಸರು ಗಸ್ತು ತಿರುಗುವಾಗ ಮೊಸಳೆ ಕಂಡಿತ್ತು. ಅದು ಸಮೀಪದ ಉದ್ಯಾನದೊಳಗೆ ಪ್ರವೇಶಿಸಬಾರದು ಎಂಬ ಉದ್ದೇಶದಿಂದ ಅದರ ಚಲನವಲನದ ಮೇಲೆ ಪೊಲೀಸರು ನಿಗಾ ಇಟ್ಟಿದ್ದರು.
ನಂತರ ಬೆಳಿಗ್ಗೆ 11ಕ್ಕೆ ಆಗಮಿಸಿದ ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಗಳು, ಅರಣ್ಯ ದಿನಗೂಲಿ ಕಾರ್ಮಿಕರು, ಪೊಲೀಸರು ಸೇರಿ ಮೊಸಳೆ ಸೆರೆ ಹಿಡಿದರು. ಅದನ್ನು ನಂತರ ಬೇನಾಳ ಬಳಿ ಇರುವ ಕೃಷ್ಣೆಯ ಹಿನ್ನೀರಿಗೆ ಒಯ್ದು ಸುರಕ್ಷಿತವಾಗಿ ನದಿಗೆ ಬಿಟ್ಟರು.
ಉಪವಲಯ ಅರಣ್ಯಾಧಿಕಾರಿ ಶ್ರೀಕಾಂತ ಘೋರ್ಪಡೆ, ಪೊಲೀಸ್ ಇನ್‌ಸ್ಪೆಕ್ಟರ್ ಶಿವಲಿಂಗ ಕುರೆನ್ನವರ, ಅಹ್ಮದ್ ಸಂಗಾಪುರ, ವಿಠ್ಠಲ ಜಾಧವ, ಮೊಸಳೆ ರಕ್ಷಕ ನಾಗೇಶ ಮೋಪಗಾರ, ವಿರೂಪಾಕ್ಷಿ ಮಾದರ ಸೇರಿ ಕೆಎಸ್‌ಐಎಸ್‌ಎಫ್ ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.