ಪ್ರಾತಿನಿಧಿಕ ಚಿತ್ರ
ಮುದ್ದೇಬಿಹಾಳ: ತಾಲ್ಲೂಕಿನಲ್ಲಿ ಕಳೆದ 20 ದಿನಗಳಿಂದ ಮಳೆಯಾಗುತ್ತಿದ್ದು, ರೈತರು ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾದ ಬೆಳೆಗಳು ಮಳೆಯಿಂದ ಹಾನಿಯಾಗಿದ್ದಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಕಟ್ಟಿದ ರೈತರು ಮಳೆಯಾದ 72 ಗಂಟೆಯೊಳಗಾಗಿ ವಿಮಾ ಕಂಪನಿಯ ದೂರವಾಣಿ ಸಂಖ್ಯೆ 18004256678ಕ್ಕೆ ಕರೆ ಮಾಡಿ ದೂರು ದಾಖಲಿಸಬೇಕು ಎಂದು ಎಡಿ ಸುರೇಶ ಭಾವಿಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕಿಗೆ ಓರಿಯಂಟಲ್ ಇನ್ಸುರೆನ್ಸ್ ಕಂಪನಿಯ ಪ್ರತಿನಿಧಿ ಮಹಾಂತಗೌಡ ಬಿರಾದಾರ ದೂ.ಸಂ.9591090583 ಹಾಗೂ ತಾಳಿಕೋಟಿ ತಾಲ್ಲೂಕಿಗೆ ಭೀಮಾಶಂಕರ ದೂ.ಸಂ. 6362835089 ಸಂಪರ್ಕಿಸಬೇಕು. ಇಲ್ಲವೇ ಮುದ್ದೇಬಿಹಾಳದ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.