ADVERTISEMENT

ಸೈಕಲ್ ಜಾಗೃತಿ ಜಾಥಾ ನಾಳೆಯಿಂದ

ಅರಣ್ಯ ಇಲಾಖೆಯಿಂದ ಆನೆ ಕಾರಿಡಾರ್ ಸಂರಕ್ಷಿಸಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 15:13 IST
Last Updated 30 ಸೆಪ್ಟೆಂಬರ್ 2020, 15:13 IST

ವಿಜಯಪುರ: ಕರ್ನಾಟಕ ಅರಣ್ಯ ಇಲಾಖೆ ವತಿಯಿಂದ ವನ್ಯಜೀವಿ ಸಪ್ತಾಹ ಅಂಗವಾಗಿ ಏರ್ಪಡಿಸಿರುವ ಆನೆ ಕಾರಿಡಾರ್ ಸಂರಕ್ಷಿಸಿ ಅಭಿಯಾನದ ನಿಮಿತ್ಯ ಸೈಕಲ್ ಜಾಗೃತಿ ಜಾಥಾ ಹಮ್ಮಿಕೊಂಡಿದ್ದು, ಇದರಲ್ಲಿ ವಿಜಯಪುರ ಸೈಕ್ಲಿಂಗ್ ಗ್ರುಪ್‍ನ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಹಾಂತೇಶ ಬಿರಾದಾರ ತಿಳಿಸಿದ್ದಾರೆ.

ಅಕ್ಟೋಬರ್ 2ರಂದು ಗಾಂಧಿ ಜಯಂತಿಯಂದು ಬೆಳಿಗ್ಗೆ 7ಕ್ಕೆ ಬೆಳಗಾವಿ ಅರಣ್ಯ ವಲಯದ ಚಿರೊಲಿಯಲ್ಲಿ ಈ ಜಾಥಾ ಆರಂಭಗೊಳ್ಳಲಿದ್ದು, ದಾಂಡೇಲಿ, ಶಿರಸಿ, ಜೋಗ್‍ಫಾಲ್ಸ್, ಸಾಗರ, ಶಿವಮೊಗ್ಗ, ಸಕ್ರೆಬೈಲ್‌ ಮೂಲಕ 450 ಕಿ.ಮೀ ದೂರವನ್ನು ಕ್ರಮಿಸಿ, ಅಕ್ಟೋಬರ 6ರಂದು ಚಿಕ್ಕಮಗಳೂರು ಸಮೀಪದ ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಮುಕ್ತಾಯಗೊಳ್ಳಲಿದೆ.

ರಾಜ್ಯದಾದ್ಯಂತ ಒಟ್ಟು 35 ಪರಿಸರ ಆಸಕ್ತರು ಭಾಗವಹಿಸುತ್ತಿರುವ ಈ ಸೈಕಲ್ ಜಾಥಾದಲ್ಲಿ ವಿಜಯಪುರ ಸೈಕ್ಲಿಂಗ್ ಗ್ರುಪ್‍ನ ಮಹಾಂತೇಶ ಬಿರಾದಾರ, ಶಿವನಗೌಡ ಪಾಟೀಲ, ಅಮೀತ ಬಿರಾದಾರ, ಸಂದೀಪ ಮಡಗೊಂಡ, ಡಾ.ರಾಜು ಯಲಗೊಂಡ, ನವೀನ ಪಾಟೀಲ, ನಂದೀಶ ಹುಂಡೇಕರ, ಬಸವರಾಜ ದೇವರ, ವಿಜಯಕುಮಾರ ಡಿ.ಕೆ, ಸೋಮಲಿಂಗ ಹಿರೆಕುರುಬರ, ಸಾತವೀರ ರೊಟ್ಟಿ ಸೇರಿದಂತೆ ಒಟ್ಟು 11ಜನ ಭಾಗವಹಿಸುತ್ತಿದ್ದಾರೆ.

ADVERTISEMENT

ಅ.1ರಂದು ಬೆ.11.30 ಹೊಸ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸರಿನಾ ಬೀಳ್ಕೊಡಲಿದ್ದಾರೆ ಎಂದು ವಿಜಯಪುರ ಸೈಕ್ಲಿಂಗ್ ಗ್ರುಪ್ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.