ದೇವರಹಿಪ್ಪರಗಿ ತಾಲ್ಲೂಕು ಸಮಾನ ಮನಸ್ಕರ ಒಕ್ಕೂಟ ಸದಸ್ಯರು ಮುಖ್ಯ ನ್ಯಾಯಾಮೂರ್ತಿ ಬಿ.ಆರ್. ಗವಾಯಿ ಮೇಲೆ ಶೂ ಎಸೆದ ಪ್ರಕರಣ ಖಂಡಿಸಿ ಪ್ರತಿಭಟನಾ ಮೆರವಣಿಗೆಯ ಕೈಗೊಂಡು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು
ದೇವರಹಿಪ್ಪರಗಿ: ಮುಖ್ಯ ನ್ಯಾಯಾಮೂರ್ತಿ ಬಿ.ಆರ್. ಗವಾಯಿ ಮೇಲೆ ಶೂ ಎಸೆತ ಪ್ರಕರಣ ಖಂಡಿಸಿ ತಾಲ್ಲೂಕು ಸಮಾನ ಮನಸ್ಕರ ಒಕ್ಕೂಟ ಸದಸ್ಯರು ಪ್ರತಿಭಟನಾ ಮೆರವಣಿಗೆ ಕೈಗೊಂಡು, ರಾಷ್ಟ್ರೀಯ ಹೆದ್ದಾರಿ ತಡೆದು ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಟಿಪ್ಪು ಸುಲ್ತಾನ ವೃತ್ತದಲ್ಲಿ ಸೋಮವಾರ ತಾಲ್ಲೂಕು ಸಮಾನ ಮನಸ್ಕರ ಒಕ್ಕೂಟ ಸದಸ್ಯರು ಸಭೆ ಸೇರಿ ಮುಖ್ಯ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೊಹರೆ ಹಣಮಂತ್ರಾಯ ವೃತ್ತದ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿನ ಡಾ. ಅಂಬೇಡ್ಕರ್ ವೃತ್ತ ತಲುಪಿ ಹೆದ್ದಾರಿಯಲ್ಲಿ ಧರಣಿ ಕುಳಿತರು.
ಈ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಪ್ರಕಾಶ ಗುಡಿಮನಿ, ‘ಮುಖ್ಯ ನ್ಯಾಯಾಮೂರ್ತಿ ಗವಾಯಿ ಅವರ ಮೇಲೆ ಶೂ ಎಸೆದಿದ್ದು ಇಡೀ ಭಾರತದ ನ್ಯಾಯಾಂಗ ವ್ಯವಸ್ಥೆಗೆ ಅವಮಾನಗೊಳಿಸಿದಂತಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಮಾನ. ಘಟನೆಗೆ ಕಾರಣವಾದ ವ್ಯಕ್ತಿಯನ್ನು ಶಿಕ್ಷಿಸಿ, ಅವನ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ಆಗ್ರಹಿಸಿದರು.
ಬೆಳಗಾವಿ ವಿಭಾಗೀಯ ಸಂಚಾಲಕ ರಾವುತ ತಳಕೇರಿ, ರಾಜಕುಮಾರ ಸಿಂದಗೇರಿ, ರಾಘವೇಂದ್ರ ಗುಡಿಮನಿ, ರಮೇಶ ದಳವಾಯಿ, ಹುಯೋಗಿ ತಳ್ಳೋಳ್ಳಿ, ಅಜೀಜ್ ಯಲಗಾರ, ಲಕ್ಕಪ್ಪ ಬಡಿಗೇರ ಮಾತನಾಡಿದರು. ನಂತರ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಬಸವರಾಜ ಇಂಗಳಗಿ, ಶರಣು ಜಮಖಂಡಿ, ಭೀರು ಹಳ್ಳಿ, ಪರಶುರಾಮ ನಾಯ್ಕೋಡಿ, ಬಸವರಾಜ ತಳಕೇರಿ, ಇಕ್ಬಾಲ್ ಬಿಜಾಪೂರ, ಚಂದ್ರಶೇಖರ ಕಡಕೋಳ, ನಜೀರ ಬೀಳಗಿ, ಮಲ್ಕಪ್ಪ ಬಾಗೇವಾಡಿ, ನವೀನ ಗುತ್ತೇದಾರ, ದೇವೇಂದ್ರ ಹಡಪದ, ಯಮನಪ್ಪ ಭೂತಾಳಿ, ಬಸವರಾಜ ಕಡಕೋಳ, ಪ್ರಕಾಶ ಶಾಂತಗಿರಿ, ಶರಣು ಪೂಜಾರಿ, ಪರಶುರಾಮ ಬಡಿಗೇರ, ಶಿವು ವಾಲೀಕಾರ, ಶಿವು ಹೊಸಮನಿ, ರಾಜು ರಾಠೋಡ, ಮಹೇಶ ಗುಡಿಮನಿ, ಮಾಂತೇಶ ಚಲವಾದಿ, ಪ್ರಕಾಶ ತಳ್ಳಿಕೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.