ದೇವರಹಿಪ್ಪರಗಿ (ವಿಜಯಪುರ): ದೇವರಹಿಪ್ಪರಗಿ ತಾಲ್ಲೂಕಿನ ಹರನಾಳ ಗ್ರಾಮದಲ್ಲಿ ಬುಧವಾರ ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು, ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.
‘ಗ್ರಾಮದ ರಾಮಪ್ಪ ನಾಯ್ಕೋಡಿ ಎಂಬುವರಿಗೆ ಸೇರಿದ ತೋಟದ ಕೃಷಿ ಹೊಂಡದಲ್ಲಿ ಅವರ ಪುತ್ರಿ ಗೀತಾ ಶ್ರೀಶೈಲ ಬಡಗಿ (28) ಮತ್ತು ಮೊಮ್ಮಕ್ಕಳಾದ ಶರತ್ (6) ಮತ್ತು ಶ್ರವಣ(4) ನೀರು ತರಲು ಹೋದಾಗ ಘಟನೆ ನಡೆದಿದೆ’ ಎಂದು ದೇವರಹಿಪ್ಪರಗಿ ಠಾಣೆಯ ಪಿಎಸ್‌ಐ ಬಸವರಾಜ ತಿಪರಡ್ಡಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.