ADVERTISEMENT

ಚಿಂತಕರ ಚಾವಡಿಗೆ ಯೋಗ್ಯರನ್ನು ಕಳುಹಿಸಿ: ಅಪ್ಪು ಪಟ್ಟಣಶೆಟ್ಟಿ

ಬಿಜೆಪಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 15:06 IST
Last Updated 3 ಡಿಸೆಂಬರ್ 2021, 15:06 IST
ಸಿಂದಗಿಯ ಮಾಂಗಲ್ಯ ಭವನದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ವಿಧಾನಪರಿಷತ್ ಚುನಾವಣೆಯ ಪ್ರಚಾರ ಸಮಾವೇಶವನ್ನು ಆರ್.ಎಸ್.ಪಾಟೀಲ ಕೂಚಬಾಳ, ರಮೇಶ ಭೂಸನೂರ, ಚಂದ್ರಶೇಖರ ಕವಟಗಿ, ಎ.ಎಸ್.ಪಾಟೀಲ ನಡಹಳ್ಳಿ ಸಾಮೂಹಿಕವಾಗಿ ಉದ್ಘಾಟಿಸಿದರು. ರಾಜಶೇಖರ ಪೂಜಾರಿ, ಶಿವಪುತ್ರ ಬಾಗಲಕೋಟ, ಶ್ರೀಕಾಂತ ಕುಲಕರ್ಣಿ, ಪಿ.ಎಚ್.ಪೂಜಾರ, ಈರಣ್ಣ ರಾವೂರ, ಶಿಲ್ಪಾ ಕುದರಗೊಂಡ ಇದ್ದಾರೆ.
ಸಿಂದಗಿಯ ಮಾಂಗಲ್ಯ ಭವನದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ವಿಧಾನಪರಿಷತ್ ಚುನಾವಣೆಯ ಪ್ರಚಾರ ಸಮಾವೇಶವನ್ನು ಆರ್.ಎಸ್.ಪಾಟೀಲ ಕೂಚಬಾಳ, ರಮೇಶ ಭೂಸನೂರ, ಚಂದ್ರಶೇಖರ ಕವಟಗಿ, ಎ.ಎಸ್.ಪಾಟೀಲ ನಡಹಳ್ಳಿ ಸಾಮೂಹಿಕವಾಗಿ ಉದ್ಘಾಟಿಸಿದರು. ರಾಜಶೇಖರ ಪೂಜಾರಿ, ಶಿವಪುತ್ರ ಬಾಗಲಕೋಟ, ಶ್ರೀಕಾಂತ ಕುಲಕರ್ಣಿ, ಪಿ.ಎಚ್.ಪೂಜಾರ, ಈರಣ್ಣ ರಾವೂರ, ಶಿಲ್ಪಾ ಕುದರಗೊಂಡ ಇದ್ದಾರೆ.   

ಸಿಂದಗಿ: ಚಿಂತಕರ ಚಾವಡಿ ಎಂದು ಕರೆಯಿಸಿಕೊಳ್ಳುವ ವಿಧಾನಪರಿಷತ್ತಿಗೆ ರಾಜಕಾರಣಿಗಳ ಬದಲು, ಯೋಗ್ಯರು, ಅನುಭವಿಗಳು, ಜ್ಞಾನಿಗಳು ಆಯ್ಕೆಯಾಗಬೇಕು ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.

ಇಲ್ಲಿಯ ಮಾಂಗಲ್ಯ ಭವನದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ವಿಧಾನಪರಿಷತ್ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿ,ಪಿ.ಎಚ್.ಪೂಜಾರ ಗೆಲುವು ಖಚಿತ ಎಂದು ಕಾಂಗ್ರೆಸ್ ಪಕ್ಷವೇ ಒಪ್ಪಿಕೊಂಡಿದೆ. ಆದರೆ, ಅವರ ಗೆಲುವು ಅತ್ಯಧಿಕ ಮತಗಳ ಅಂತರದಿಂದ ಆಗಬೇಕಿದೆ. ವಿಧಾನಪರಿಷತ್ತಿನ ಚುನಾವಣೆಗೆ ಸ್ಪರ್ಧಿಸಿರುವ ಪೈಪೋಟಿ ಅಭ್ಯರ್ಥಿಗಳಲ್ಲಿ ಯೋಗ್ಯರೆಂದರೆ ಬಿಜೆಪಿ ಅಭ್ಯರ್ಥಿ ಎಂದರು.

‌ವಿಜಯಪುರ-ಬಾಗಲಕೋಟೆ ಅಖಂಡ ಜಿಲ್ಲೆಯಿದ್ದಾಗ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಶ್ರಮ ಪೂಜಾರ ಅವರದ್ದಾಗಿದೆ. ಸುದೀರ್ಘ ವರ್ಷಗಳ ಕಾಲ ಅಧಿಕಾರ ವಂಚಿತರಾಗಿದ್ದರು ಎಂದು ಹೇಳಿದರು.

ADVERTISEMENT

ಗ್ರಾಮ ಪಂಚಾಯ್ತಿ ಸದಸ್ಯರ ಗೌರವ ಧನ ಹೆಚ್ಚಿಸುವ ಭರವಸೆ ಕೊಡುತ್ತಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಗೌರವಧನ ಪ್ರಾರಂಭಿಸಿರುವುದು ಬಿಜೆಪಿ ಸರ್ಕಾರ ಎನ್ನುವುದು ಮರೆಯಬಾರದು ಎಂದರು.

ಅಭ್ಯರ್ಥಿ ಪಿ.ಎಚ್.ಪೂಜಾರ ಮಾತನಾಡಿ, ಗ್ರಾಮ ಪಂಚಾಯ್ತಿ ಖಾತೆಗಳಿಗೆ ನೇರವಾಗಿ ಹಣ ಜಮೆಯಾಗುವಂತೆ ಕ್ರಮ ಜರುಗಿಸಿರುವುದು ಬಿಜೆಪಿ ಸರ್ಕಾರ. ಗ್ರಾಮೀಣ ಭಾಗದಿಂದ ಬಂದ ನನಗೆ ಗ್ರಾಮೀಣ ಸಮಸ್ಯೆಗಳ ಅರಿವಿದೆ. ಹೀಗಾಗಿ ಗ್ರಾಮೀಣ ಸಮಸ್ಯೆಗಳ ಪರಿಹಾರಕ್ಕಾಗಿ ಸೇವೆ ಸಲ್ಲಿಸಲು ಅವಕಾಶ ನೀಡುವಂತೆ ಮತಯಾಚನೆ ಮಾಡಿದರು.

ಶಾಸಕ ರಮೇಶ ಭೂಸನೂರ ಮಾತನಾಡಿ, ಮತಕ್ಷೇತ್ರದಲ್ಲಿ 498 ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ಮತದಾರರಿದ್ದಾರೆ. ಇವುಗಳಲ್ಲಿ ಇಂದಿನ ಸಮಾವೇಶದಲ್ಲಿ 372 ಹಾಜರಾತಿ ಇದೆ. ಇದರಲ್ಲಿ 300 ಮತಗಳು ಬಿಜೆಪಿ ಅಭ್ಯರ್ಥಿ ಪಿ.ಎಚ್.ಪೂಜಾರ ಅವರಿಗೆ ಪ್ರಥಮ ಪ್ರಾಶಸ್ತ್ಯ ಮತವಾಗಿ ಬರುವುದು ಶತಸಿದ್ದ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇವರಹಿಪ್ಪರಗಿ, ಸಿಂದಗಿ, ಮುದ್ದೇಬಿಹಾಳ ಮೂರು ಕ್ಷೇತ್ರಗಳಿಂದ ಬಿಜೆಪಿ ಅಭ್ಯರ್ಥಿ 5 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿದರು.

ವಿಧಾನಪರಿಷತ್ ಸದಸ್ಯ ಅರುಣ ಶಹಾಪೂರ ಮಾತನಾಡಿ, ವಿಧಾನಪರಿಷತ್ತಿನಲ್ಲಿ ಬಿಜೆಪಿಗೆ ಸದಸ್ಯರ ಸಂಖ್ಯಾಬಲ ಕೊರತೆ ಇದೆ. ಮಹತ್ವದ ವಿಷಯಗಳಿಗೆ ಒಪ್ಪಿಗೆ ದೊರಕುತ್ತಿಲ್ಲ. ಈಗ 25 ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇದರಲ್ಲಿ ಬಿಜೆಪಿ 15 ಸ್ಥಾನಗಳನ್ನು ಗೆದ್ದರೆ ಬಹುಮತ ದೊರಕುತ್ತದೆ ಎಂದು ಹೇಳಿದರು.

ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮಂಡಲ ಅಧ್ಯಕ್ಷ ಈರಣ್ಣ ರಾವೂರ ಮಾತನಾಡಿದರು.

ಬಿಜೆಪಿ ಪ್ರಮುಖರಾದ ಚಂದ್ರಶೇಖರ ಕವಟಗಿ, ಸಿದ್ದು ಪಾಟೀಲ ಹೂವಿನಹಳ್ಳಿ, ಮಲ್ಲಿಕಾರ್ಜುನ ಜೋಗೂರ, ಬಸವರಾಜ ಕುಂಬಾರ, ಬಿ.ಎಚ್.ಬಿರಾದಾರ, ರಾಜಶೇಖರ ಪೂಜಾರಿ, ಶಿಲ್ಪಾ ಕುದರಗೊಂಡ, ಬಸವರಾಜ ಹೂಗಾರ, ಸುನಂದಾ ಯಂಪೂರೆ, ಸಂತೋಷ ಪಾಟೀಲ ಡಂಬಳ, ಸಿದ್ದು ಬುಳ್ಳಾ, ಸಂಜಯ ಪಾಟೀಲ ಕನಮಡಿ,ನಿಂಗರಾಜ ಬಗಲಿ,ಗುರು ತಳವಾರ ಇದ್ದರು.

***

ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ತಿಗೆ ಸ್ಪರ್ಧಿಸಿರುವ ಏಳು ಅಭ್ಯರ್ಥಿಗಳ ಇತಿಹಾಸ ಗಮನಿಸಿ ಅಂಕ ನೀಡಿ. ಅನುಭವ ಮಂಟಪಪೋದಿಯಲ್ಲಿರುವ ಪರಿಷತ್ತಿಗೆ ಯೋಗ್ಯ, ಸಾಮಾಜಿಕ ಕಳಕಳಿವುಳ್ಳ ಯೋಗ್ಯರನ್ನು ಆಯ್ಕೆ ಮಾಡಿ
ಎ.ಎಸ್.ಪಾಟೀಲ ನಡಹಳ್ಳಿ,ಶಾಸಕ

***

ಗ್ರಾಮ ಮಟ್ಟದ ಮಂಡಲ ಪಂಚಾಯ್ತಿ, ಗ್ರಾಮ ಪಂಚಾಯ್ತಿ ಗಳ ಕತ್ತು ಹಿಸುಕಿ ಹಾಕಿದ್ದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ಸೇತರ ಸರ್ಕಾರದಲ್ಲಿ ಗ್ರಾಮ ಪಂಚಾಯ್ತಿಗಳಿಗೆ ಹೆಚ್ಚಿನ ಆರ್ಥಿಕ ಬಲ ಬಂದಿದೆ.
–ರಮೇಶ ಭೂಸನೂರ
ಶಾಸಕ, ಸಿಂದಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.