ADVERTISEMENT

ವಿಜಯಪುರ: ವಿಶ್ವಕರ್ಮ ಸಮಾಜ: ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 6:05 IST
Last Updated 2 ಅಕ್ಟೋಬರ್ 2019, 6:05 IST
ಮುದ್ದೇಬಿಹಾಳ ಪಟ್ಟಣದಲ್ಲಿ ಭಾನುವಾರ ನಡೆದ ಸಭೆಯಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡ ನಾರಾಯಣ ದೋಟಿಹಾಳ ಹಾಗೂ ಪದಾಧಿಕಾರಿಗಳನ್ನು ಸಮಾಜ ಬಾಂಧವರು ಅಭಿನಂದಿಸಿದರು
ಮುದ್ದೇಬಿಹಾಳ ಪಟ್ಟಣದಲ್ಲಿ ಭಾನುವಾರ ನಡೆದ ಸಭೆಯಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡ ನಾರಾಯಣ ದೋಟಿಹಾಳ ಹಾಗೂ ಪದಾಧಿಕಾರಿಗಳನ್ನು ಸಮಾಜ ಬಾಂಧವರು ಅಭಿನಂದಿಸಿದರು   

ಮುದ್ದೇಬಿಹಾಳ: ‘ವಿಶ್ವಕರ್ಮರು ತಮ್ಮ ಪಂಚ ಕಸುಬುಗಳ ಮೂಲಕ ಕಲೆ, ಶಿಲ್ಪ ಕಲೆ, ವಾಸ್ತುವನ್ನು ಇಡೀ ವಿಶ್ವಕ್ಕೆ ಪರಿಚಯಿಸುವ ಮೂಲಕ ಮಾದರಿಯಾಗಿದ್ದಾರೆ’ ಎಂದು ವಿಶ್ವಕರ್ಮ ಸಮಾಜದ ನೂತನ ಅಧ್ಯಕ್ಷ ನಾರಾಯಣ ದೋಟಿಹಾಳ ಹೇಳಿದರು.

ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿರುವ ಶ್ರೀ ಕಾಳಿಕಾದೇವಿ ದೇವಸ್ಥಾನದ ಸಭಾ ಭವನದಲ್ಲಿ ಭಾನುವಾರ ನಡೆದ ವಿಶ್ವಕರ್ಮ ಸಮಾಜದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸರ್ವರೂ ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆದು, ಸಮಾಜವನ್ನು ಮೇಲೆತ್ತುವ ಕೆಲಸಕ್ಕೆ ಎಲ್ಲರೂ ಸಹಕಾರ ನೀಡಬೇಕು. ನಾವು ನಮ್ಮಲ್ಲಿರುವ ಒಡಕು, ವೈಮನಸ್ಸುಗಳನ್ನು ಮರೆತು ಒಗ್ಗಟ್ಟು ಪ್ರದರ್ಶಿಸಬೇಕು. ಪಟ್ಟಣದಲ್ಲಿ ಶ್ರೀ ಮೌನೇಶ್ವರ ದೇವಸ್ಥಾನ ನಿರ್ಮಾಣ, ಹುಡ್ಕೋ ಬಡಾವಣೆಯಲ್ಲಿ ವಿಶ್ವಕರ್ಮ ಸಮುದಾಯ ಭವನ, ಸಮಾಜದ ಮಕ್ಕಳಿಗೆ ಉನ್ನತ ಶಿಕ್ಷಣಾಭ್ಯಾಸಕ್ಕೆ ನೆರವು ಸೇರಿದಂತೆ ಅನೇಕ ಯೋಜನೆಗಳನ್ನು ಕೈಗೊಳ್ಳಬೇಕಿದೆ’ ಎಂದು ಹೇಳಿದರು.

ADVERTISEMENT

ಪದಾಧಿಕಾರಿಗಳು: ನಾರಾಯಣ ದೋಟಿಹಾಳ (ಅಧ್ಯಕ್ಷ), ಮುದಕಣ್ಣ ಪತ್ತಾರ ತಾರನಾಳ (ಉಪಾಧ್ಯಕ್ಷ), ಮನೋಹರ ಶಿರವಾಳ (ಕಾರ್ಯದರ್ಶಿ), ಈರಣ್ಣ ಬಡಿಗೇರ (ಖಜಾಂಚಿ) ಮಾನಪ್ಪ ಪತ್ತಾರ ತಮದಡ್ಡಿ, ಪ್ರಭಾಕರ ಪತ್ತಾರ, ಚಂದ್ರಶೇಖರ ಪತ್ತಾರ, ಅಶೋಕ ಪತ್ತಾರ ಬಳಬಟ್ಟಿ, ಮಳಿಯಪ್ಪ ಪತ್ತಾರ, ವಿರೂಪಾಕ್ಷಿ ಪತ್ತಾರ ಇಟಗಿ, ಬ್ರಹ್ಮಾನಂದ ನಂದರಗಿ (ಸದಸ್ಯರು) ಇವರನ್ನು ಆಯ್ಕೆ ಮಾಡಲಾಯಿತು.

ದೇವಸ್ಥಾನದ ಅರ್ಚಕ ಸುರೇಶ ಆಚಾರ, ಮೌನೇಶ ಹಂದ್ರಾಳ, ಆನಂದ ಪತ್ತಾರ, ವಿಜಯ ಬಡಿಗೇರ, ಕಾಳಪ್ಪ ಶಿವಪುರ, ಪತ್ರಕರ್ತ ನಾರಾಯಣ ಮಾಯಾಚಾರಿ, ರಾಘವೇಂದ್ರ ಪತ್ತಾರ, ಈರಣ್ಣ ಕೋಡಿಹಾಳ, ಮೌನೇಶ ಕೋಳೂರ, ಲಕ್ಷ್ಮೀಕಾಂತ ಬಡಿಗೇರ ವಂದಾಲ, ಬಸವರಾಜ ಬಡಿಗೇರ ಹಡ್ಲಗೇರಿ, ಈರಣ್ಣ ಶಿರವಾಳ, ಎಸ್.ಡಿ.ಬಡಿಗೇರ ಬಿದರಕುಂದಿ, ಮೌನೇಶ ಬಳಬಟ್ಟಿ, ಗುಂಡು ಕವಡಿಮಟ್ಟಿ, ಮಹಾದೇವಪ್ಪ ಪತ್ತಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.