ADVERTISEMENT

ಪ್ರವಾಹ; ₹20 ಕೋಟಿ ಆಸ್ತಿ ಹಾನಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 15:36 IST
Last Updated 13 ಆಗಸ್ಟ್ 2019, 15:36 IST

ವಿಜಯಪುರ: ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಭೀಮಾ ನದಿಗಳು ಅಪಾಯ ಮಟ್ಟ ಮೀರಿ ಹರಿದಿದ್ದರಿಂದ ಸೇತುವೆ, ರಸ್ತೆ, ಬಾಂದಾರು, ವಿದ್ಯುತ್ ಉಪಕರಣಗಳು ಸೇರಿ ಒಟ್ಟು ₹20 ಕೋಟಿ ಹಾನಿಯಾಗಿದೆ ಎಂಬುದು ಪ್ರಾಥಮಿಕ ಸಮೀಕ್ಷೆಯಿಂದ ತಿಳಿದು ಬಂದಿದೆ.

ರಾಜ್ಯ ಹೆದ್ದಾರಿ ₹5 ಕೋಟಿ, ಗ್ರಾಮೀಣ ರಸ್ತೆಗಳು ₹4.18 ಕೋಟಿ, ಸೇತುವೆ ₹1.12 ಕೋಟಿ, ಕೆರೆ/ಬಾಂದಾರು ₹0.98 ಕೋಟಿ, ನೀರು ಸರಬರಾಜು ₹2.64 ಕೋಟಿ, ವಿದ್ಯುತ್ ಉಪಕರಣಗಳು ₹6.55 ಕೋಟಿ ಹಾನಿಯಾಗಿದೆ.

ಮುದ್ದೇಬಿಹಾಳ ಮತ್ತು ನಿಡಗುಂದಿ ತಾಲ್ಲೂಕಿನಲ್ಲಿ ತೆರೆದಿರುವ ಪರಿಹಾರ ಕೇಂದ್ರಗಳನ್ನು ಮುಂದುವರಿಸಲಾಗಿದ್ದು, ಬಬಲೇಶ್ವರ ತಾಲ್ಲೂಕಿನ ಶಿರಗೂರ, ಜಂಬಗಿ (ಎಚ್) ಮತ್ತು ಚಿಕ್ಕ ಗಲಗಲಿಯಲ್ಲಿ ಮೂರು ಪರಿಹಾರ ಕೇಂದ್ರಗಳನ್ನು ಮಂಗಳವಾರ ಆರಂಭಿಸಲಾಗಿದೆ.

ADVERTISEMENT

ಬೆಳೆ ಸಮೀಕ್ಷೆ: ಭೀಮಾ ನದಿ ತೀರದಲ್ಲಿ ಪ್ರವಾಹದಿಂದ ಬೆಳೆ ಹಾನಿಯಾಗಿದ್ದು, ಜಂಟಿ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಕೃಷ್ಣಾ ನದಿ ತೀರದ ಹಾನಿಯನ್ನು ನೀರು ಇಳಿದ ಬಳಿಕ ಆರಂಭಿಸಲಾಗುವುದು. ಗ್ರಾಮಗಳಲ್ಲಿನ ಮನೆಗಳು ಜಲಾವೃತವಾಗಿರುವುದರಿಂದ ಸಮೀಕ್ಷೆ ಕೈಗೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ, ಡ್ರೋನ್ ಮೂಲಕ ಸರ್ವೆ ಕಾರ್ಯ ನಡೆದಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.