ADVERTISEMENT

ಮಹಾಬಲೇಶ್ವರದಲ್ಲಿ ಎಸ್.ಕೆ. ಬೆಳ್ಳುಬ್ಬಿ ದಂಪತಿಯಿಂದ ಕೃಷ್ಣೆಗೆ ಗಂಗಾಪೂಜೆ, ಬಾಗಿನ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 12:34 IST
Last Updated 13 ಜುಲೈ 2022, 12:34 IST
ಮಹಾರಾಷ್ಟ್ರದ ಸತಾರ ಜಿಲ್ಲೆಯ ಮಹಾಬಲೇಶ್ವರದಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ದಂಪತಿ ಬುಧವಾರ ಗಂಗಾಪೂಜೆ ಸಲ್ಲಿಸಿ, ಬಾಗಿನ ಅರ್ಪಣೆ ಮಾಡಿದರು.
ಮಹಾರಾಷ್ಟ್ರದ ಸತಾರ ಜಿಲ್ಲೆಯ ಮಹಾಬಲೇಶ್ವರದಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ದಂಪತಿ ಬುಧವಾರ ಗಂಗಾಪೂಜೆ ಸಲ್ಲಿಸಿ, ಬಾಗಿನ ಅರ್ಪಣೆ ಮಾಡಿದರು.   

ವಿಜಯಪುರ: ಕೃಷ್ಣೆಯ ಉಗಮಸ್ಥಾನವಾದ ಮಹಾರಾಷ್ಟ್ರದ ಸತಾರ ಜಿಲ್ಲೆಯ ಮಹಾಬಲೇಶ್ವರದಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ದಂಪತಿ ಬುಧವಾರ ಗಂಗಾಪೂಜೆ ಸಲ್ಲಿಸಿ, ಬಾಗಿನ ಅರ್ಪಣೆ ಮಾಡಿದರು.

15 ವರ್ಷಗಳಿಂದ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳ ರೈತರೊಂದಿಗೆ ತೆರಳಿ ಕೃಷ್ಣೆಗೆ ಬಾಗಿನ ಅರ್ಪಣೆ ಮಾಡುತ್ತಾ ಬಂದಿದ್ದಾರೆ.

ಕೃಷ್ಣೆ, ಕೊಯ್ನಾ, ವೆನ್ನಾ, ಗಾಯಿತ್ರಿ ಹಾಗೂ ಸಾವಿತ್ರಿ ನದಿಗಳ‌ ಸಂಗಮ ಸ್ಥಳವಾಗಿರುವ ಮಹಾಬಲೇಶ್ವರದ ಪಂಚಗಂಗಾದಲ್ಲಿ
ಕೊಲ್ಹಾರದ ಕೈಲಾಸನಾಥ ಸ್ವಾಮೀಜಿ ಸಾನ್ನಿಧ್ಯಲ್ಲಿ ಬಾಗಿನ ಅರ್ಪಿಸಿದರು.

ADVERTISEMENT

ಉತ್ತಮ ಮಳೆಬೆಳೆಯಾಗಿ ಉತ್ತರ ಕರ್ನಾಟಕ ಸೇರಿದಂತೆ ನಾಡಿನ ಅನ್ನದಾತರ ಕೈಹಿಡಿಯುವಂತೆ ಸಂಕಲ್ಪಿಸಿ ವಿಶೇಷ ಪೂಜೆ ಸಲ್ಲಿಸಿರುವುದಾಗಿ ಬೆಳ್ಳುಬ್ಬಿ ಹೇಳಿದರು.

ಸುರಿಯುತ್ತಿದ್ದ ಬಾರಿ ಮಳೆ ಲೆಕ್ಕಿಸದೇ ಅವಳಿ ಜಿಲ್ಲೆಯ ನೂರಾರು ರೈತರು ಮಹಾಬಲೇಶ್ವರಕ್ಕೆ ತೆರಳಿ ಪೂಜೆ ಸಲ್ಲಿಸಿರುವುದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.