ವಿಜಯಪುರ: ಜಿಲ್ಲೆಯತಿಕೋಟಾ, ಬಬಲೇಶ್ವರ ಹಾಗೂ ವಿಜಯಪುರ ಗ್ರಾಮೀಣ ಠಾಣೆಗಳ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಮನೆಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರ್ಯಾಚರಣೆ ನಡೆಸಿ, ನಾಲ್ವರು ಅಂತರರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಜತ್‌ನ ಪಾರದಿ ತಾಂಡಾದ ಕಿಶನ್ ಚವ್ಹಾಣ, ರೋಹಿತ ಚವ್ಹಾಣ,ಸಂತೋಷ ಚವ್ಹಾಣ ಮತ್ತು ಕಿರಣ ಕಾಳೆ ಎಂಬುವವರನ್ನು ಬುಧವಾರ ಬಂಧಿಸಿದ್ದಾರೆ.
ಆರೋಪಿಗಳ ಬಳಿ ಇದ್ದ ₹4.60 ಲಕ್ಷ ಮೌಲ್ಯದ 100 ಗ್ರಾಂ ಬಂಗಾರದ ಆಭರಣ, ₹15 ಸಾವಿರ ಮೌಲ್ಯದ200 ಗ್ರಾಂ ಬೆಳ್ಳಿಯ ಆಭರಣ ಮತ್ತು ₹5 ಲಕ್ಷ ಮೊತ್ತದ ಕಾರು ಸೇರಿದಂತೆಒಟ್ಟು ₹9.75 ಲಕ್ಷ ಮೊತ್ತದ ಮಾಲನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.
ವಿಜಯಪುರ ಗ್ರಾಮೀಣಸಿಪಿಐಎಸ್.ಬಿ.ಪಾಲಭಾವಿ ನೇತೃತ್ವದಲ್ಲಿ ಗಾಂಧಿಚೌಕ ಸಿಪಿಐ ರವಿಂದ್ರ ನಾಯಕೊಡಿ, ತಿಕೊಟಾ ಪೊಲೀಸ್ ಠಾಣೆಪಿ.ಎಸ್.ಐ ಬಿ.ಬಿ.ಬಿಸನಕೊಪ್ಪ ಮತ್ತುಎಸ್.ಕೆ.ಲಂಗೂಟಿ ಹಾಗೂ ಸಿಬ್ಬಂದಿಗಳಾದ ಎಂ.ಎನ್. ಮುಜಾವರ, ಆರ್.ಡಿ.ಅಂಜುಟಗಿ, ಎಲ್.ಎಸ್.ಹಿರೇಗೌಡರ, ಎಂ.ಬಿ.ಜನಗೊಂಡ, ಸಲೀಂ ಸೌದಿ, ಸಿದ್ದು ದಾನಪ್ಪಗೋಳ, ಎಂ.ಎನ್.ಇಚ್ಚುರ, ಹೊನಗೌಡ, ಅನೀಲ ಚೌಗಲೆ, ಎಸ್.ಎಸ್.ಹರಿಜನ, ಶಿವು ಕುಂಬಾರ ಅವರನ್ನು ಒಳಗೊಂಡ ತಂಡವು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.