ADVERTISEMENT

ವಿಜಯಪುರ: ಸೆ.6 ರಿಂದ ಪದವಿ, 14 ರಿಂದ ಸ್ನಾತಕೋತ್ತರ ಪದವಿ ಪರೀಕ್ಷೆಗಳು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 6:34 IST
Last Updated 5 ಸೆಪ್ಟೆಂಬರ್ 2020, 6:34 IST

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳನ್ನು ಸೆ.6 ರಿಂದ 25ರವರೆಗೆ ಹಾಗೂ ಸ್ನಾತಕೋತ್ತರ ಪರೀಕ್ಷೆಗಳನ್ನು 14ರಿಂದ 20ರವರೆಗೆ ಸರ್ಕಾರದ ಮಾರ್ಗಸೂಚಿಯ ಅನ್ವಯ ನಡೆಸಲಾಗುತ್ತಿದೆ.

ರಾಜ್ಯದ 15 ಜಿಲ್ಲೆಗಳಲ್ಲಿರುವ 93 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ತಯಾರಿ ನಡೆಸಲಾಗಿದ್ದು, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆಪರೀಕ್ಷೆ ನಡೆಸುವ ಕುರಿತು ಪತ್ರ ಕಳುಹಿಸಲಾಗಿದೆ.ಕಾಲೇಜು, ಸ್ನಾತಕೋತ್ತರ ವಿಭಾಗ, ಸ್ನಾತಕೋತ್ತರ ಕೇಂದ್ರ ಆವರಣ ಹಾಗೂ ವಸತಿ ಗೃಹಗಳನ್ನು ಪರೀಕ್ಷೆಗೂ ಮೊದಲು ಸ್ಯಾನಿಟೈಸ್ ಮಾಡಲಾಗಿದೆ. ವಿ.ವಿಯ ಯಾವುದೇ ವಸತಿಗೃಹ ಅಥವಾ ಕೇಂದ್ರವನ್ನು ಆಯಾ ಜಿಲ್ಲಾಡಳಿತ ಕ್ವಾರಂಟೈನ್‍ಗೆ ಬಳಸಿಕೊಂಡಿದ್ದರೆ, ಅವುಗಳನ್ನು ಮರಳಿ ಪಡೆಯಲಾಗಿದೆ.

ಪರೀಕ್ಷೆ ಸಮಯದಲ್ಲಿ ಕೊರೊನಾಶಂಕೆ ಕಂಡುಬಂದಲ್ಲಿ ಅಂಥವರಿಗೆ ಪರ್ಯಾಯಕೊಠಡಿ ನೀಡಿ, ಕ್ವಾರಂಟೈನ್ ವ್ಯವಸ್ಥೆ ಮಾಡಲು ತಯಾರಿ ಮಾಡಲಾಗಿದೆ. ಇತರೆ ರಾಜ್ಯಗಳ ವಿದ್ಯಾರ್ಥಿನಿಯರು ತಮ್ಮ ಸ್ವಂತ ಊರಿಗೆ ಈಗಾಗಲೇ ಹೋಗಿದ್ದಲ್ಲಿ, ಅಂಥವರುಪರೀಕ್ಷೆ ಪ್ರಾರಂಭಕ್ಕೂ ಮುನ್ನ ಆಗಮಿಸಿ ಕರ್ನಾಟಕ ಸರ್ಕಾರದ ನಿಯಮದಂತೆ ಸಾಂಸ್ಥಿಕ ಹಾಗೂ ಗೃಹ ಕ್ವಾರಂಟೈನ್‍ ಅವಧಿಯನ್ನು ಮುಗಿಸಿಕೊಳ್ಳಬೇಕು.

ADVERTISEMENT

ಪ್ರತಿ ವಿದ್ಯಾರ್ಥಿನಿ ಹಾಗೂ ಪರೀಕ್ಷಾ ಸಿಬ್ಬಂದಿ ಆರೋಗ್ಯ ಸೇತು ಆ್ಯಪ್‍ ಅಳವಡಿಸಿಕೊಳ್ಳುವುದು ಕಡ್ಡಾಯ. ಪರೀಕ್ಷೆ ಪ್ರಾರಂಭಕ್ಕೂ ಮುನ್ನ ಹಿರಿಯ ಮೇಲ್ವಿಚಾರಕರು ಥರ್ಮಲ್ ಸ್ಕ್ರೀನಿಂಗ್ ಮೂಲಕ ದೇಹದ ತಾಪಮಾನವನ್ನು ಪರೀಕ್ಷಿಸುತ್ತಾರೆ. ಮಾಸ್ಕ್ ಧರಿಸುವುದು ಹಾಗೂಪರಸ್ಪರ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ.

ಕೆಎಸ್ಆರ್‌ಟಿಸಿ, ಎನ್‌ಡಬ್ಲುಕೆಎಸ್ಆರ್‌ಟಿಸಿಸೇರಿದಂತೆ ಎಲ್ಲ ಬಸ್ ಡಿಪೊ ವಿಭಾಗಗಳ ಮುಖ್ಯಸ್ಥರಿಗೆ ಕಾಲೇಜಿಗೆ ಹೋಗಲು ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಕಲ್ಪಿಸಲು ಪತ್ರ ಬರೆಯಲಾಗಿದೆ. ಎಲ್ಲ ಕಾಲೇಜುಗಳ ಪ್ರಾಚಾರ್ಯರ ಜತೆ ಝೂಮ್ ಮೀಟಿಂಗ್ ಮೂಲಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಮಹಿಳಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಪಿ.ಜಿ.ತಡಸದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.