ADVERTISEMENT

ವಿಜಯಪುರ: ಹಲಸಂಗಿ ಗೆಳೆಯರ ಪ್ರತಿಷ್ಠಾನ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 12:26 IST
Last Updated 29 ಜನವರಿ 2021, 12:26 IST
2019ನೇ ಸಾಲಿನ ಕಾವ್ಯ ವಿಭಾಗದ ಪ್ರಶಸ್ತಿಯನ್ನು ಡಾ. ಜಿನದತ್ತ ದೇಸಾಯಿ, ಯುವ ಸಾಹಿತಿ ಪ್ರಶಸ್ತಿಯನ್ನು ಅಕ್ಷತಾ ಕೃಷ್ಣಮೂರ್ತಿ ಅವರಿಗೆ ನೀಡಲಾಯಿತು.
2019ನೇ ಸಾಲಿನ ಕಾವ್ಯ ವಿಭಾಗದ ಪ್ರಶಸ್ತಿಯನ್ನು ಡಾ. ಜಿನದತ್ತ ದೇಸಾಯಿ, ಯುವ ಸಾಹಿತಿ ಪ್ರಶಸ್ತಿಯನ್ನು ಅಕ್ಷತಾ ಕೃಷ್ಣಮೂರ್ತಿ ಅವರಿಗೆ ನೀಡಲಾಯಿತು.   

ವಿಜಯಪುರ: ಹಲಸಂಗಿ ಗೆಳೆಯರ ಪ್ರತಿಷ್ಠಾನದ 2019-20ನೇ ಸಾಲಿನ ಪ್ರಶಸ್ತಿ ಪ್ರದಾನ ಹಾಗೂ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
2019ನೇ ಸಾಲಿನ ಕಾವ್ಯ ವಿಭಾಗದ ಪ್ರಶಸ್ತಿಯನ್ನು ಡಾ. ಜಿನದತ್ತ ದೇಸಾಯಿ, ಯುವ ಸಾಹಿತಿ ಪ್ರಶಸ್ತಿಯನ್ನು ಅಕ್ಷತಾ ಕೃಷ್ಣಮೂರ್ತಿ ಅವರಿಗೆ ನೀಡಲಾಯಿತು.

2020ನೇ ಸಾಲಿನ ಕಾವ್ಯ ವಿಭಾಗದ ಪ್ರಶಸ್ತಿಯನ್ನು ಡಾ.ನಾ. ಮೊಗಸಾಲೆ, ಶೋಧನ/ವಿಮರ್ಶೆ ಕ್ಷೇತ್ರದ ಪ್ರಶಸ್ತಿಯನ್ನು ಡಾ.ಗುರುಲಿಂಗ ಕಾಪಸೆ, ಜಾನಪದ ಸಾಹಿತ್ಯ ಸಾಧನೆಗೆ ಡಾ.ಶ್ರೀ ರಾಮ ಇಟ್ಟಣ್ಣವ ಅವರಿಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರದಾನ ಮಾಡಿದರು.

ಇನ್ನುಳಿದ ಪ್ರಶಸ್ತಿ ವಿಜೇತರಾದ ಡಾ.ವೈ.ಸಿ. ಭಾನುಮತಿ, ಡಾ.ರಾಮೇಗೌಡ ಮತ್ತು ಟಿ.ಎಸ್.ಗೊರವರ ಕಾರ್ಯಕ್ರಮಕ್ಕೆ ಗೈರಾಗಿದ್ದರು

ADVERTISEMENT

ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಅವರು ಕೃತಿಗಳನ್ನು ಲೋಕಾರ್ಪಣೆ ಮಾಡಿದರು.
ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ಪ್ರತಿಷ್ಠಾನ ದ ಅಧ್ಯಕ್ಷ ರಾದ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಪ್ರತಿಷ್ಠಾನ ದ ಸಂಚಾಲಕ ಪ್ರೊ.ದೊಡ್ಡಣ್ಣ ಬಜಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಈರಪ್ಪ ಆಶಾಪೂರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.