ADVERTISEMENT

ಸಿರಿ ಸಂಪತ್ತು ಶಾಶ್ವತವಲ್ಲ: ರಂಭಾಪುರಿ ಶ್ರೀ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 14:31 IST
Last Updated 21 ಜೂನ್ 2025, 14:31 IST
ಹೊರ್ತಿ ಸಮೀಪದ ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಸುಸಲಾದಿ ಗ್ರಾಮದ (ಕಾಶೇಕರ ವಸ್ತಿಯ)ಲ್ಲಿ ನೂತನವಾಗಿ ನಿರ್ಮಿಸಿದ ಮಲ್ಲಿಕಾರ್ಜುನ ದೇವಸ್ಥಾನದ ಉದ್ಘಾಟನೆ ಹಾಗೂ ಲಿಂಗ ಪ್ರತಿಷ್ಠಾಪನೆ, ಕಳಸಾರೋಹಣ ಜನಜಾಗ್ರತಿ ಮತ್ತು ಧರ್ಮ ಜಾಗೃತಿ ಕಾರ್ಯಕ್ರಮವನ್ನು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಶ್ರೀಗಳು ಶುಕ್ರವಾರ ಉದ್ಘಾಟಿಸಿದರು

ಹೊರ್ತಿ: ‘ಮನುಷ್ಯನಿಗೆ ಬರುವ ಸಿರಿ ಸಂಪತ್ತು ಶಾಶ್ವತವಲ್ಲ. ಅಧ್ಯಾತ್ಮ ಜ್ಞಾನವೊಂದೇ ನಿಜವಾದ ಸಂಪತ್ತು. ಸಿರಿ ಬಂದಾಗ ದೇವರು ಮತ್ತು ಧರ್ಮವನ್ನು ಮರೆಯಬಾರದು’ ಎಂದು ಬಾಳೆಹೊನ್ನೂರಿನ ರಂಭಾಪುರಿ ವೀರಸೋಮೇಶ್ವರ ಶ್ರೀ ಅಭಿಪ್ರಾಯಪಟ್ಟರು.

ಸಮೀಪದ ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಸುಸಲಾದಿ ಗ್ರಾಮದ ಕಾಶೇಕರ ವಸ್ತಿಯಲ್ಲಿ ಮಲ್ಲಿಕಾರ್ಜುನ ದೇವಸ್ಥಾನದ ಉದ್ಘಾಟನೆ ಹಾಗೂ ಲಿಂಗ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ನಡೆದ ಜನಜಾಗೃತಿ ಮತ್ತು ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

‘ದೇವರು ಮತ್ತು ಧರ್ಮವನ್ನು ತೋರಿಸುವಾತನೇ ನಿಜವಾದ ಗುರು. ಪರಶಿವನ ಸಾಕಾರ ಇನ್ನೊಂದು ರೂಪವೇ ಗುರು. ಅಜ್ಞಾನ ಕಳೆದು ಜ್ಞಾನ ಜ್ಯೋತಿ ಬೆಳಗಿಸುವ ಶಕ್ತಿ ಗುರುವಿಗೆ ಇದೆ’ ಎಂದರು.

ADVERTISEMENT

ದೇವಸ್ಥಾನ ಉದ್ಘಾಟನೆ ಪ್ರಯುಕ್ತ 5 ದಿನಗಳ ಕಾಲ ಜೇರಟಗಿಯ ಮಡಿವಾಳೇಶ್ವರ ಶಾಸ್ತ್ರಿ ಅವರಿಂದ ಆಧ್ಯಾತ್ಮಿಕ ಪ್ರವಚನ ನಡೆಯಿತು.

ಸಕಲ ಸದ್ಭಕ್ತರಿಗೂ ಅನ್ನ ದಾಸೋಹ ಜರುಗಿತು. ತಡವಲಗಾದ ಅಭಿನವ ರಾಚೋಟೇಶ್ವರ ಶ್ರೀ, ಆಲಮೇಲದ ಚಂದ್ರಶೇಖರ ಶ್ರೀ, ಜಗಜೇವಣಿ ಮುಪ್ಪಿನಾರ್ಯ ಶ್ರೀ, ಗುರುಪಾದೇಶ್ವರ ಶ್ರೀ, ಭಾರತ ಸರ್ಕಾರದ ಸಿಮೆಂಟ್ ಬೋರ್ಡ ಸಂಚಾಲಕ ರವೀಂದ್ರ ಅರಳಿ, ಮಾಜಿ ಶಾಸಕ ವಿಕ್ರಮಸಿಂಗ ಸಾವಂತ, ಸಂಜಯ ನಾನಾ ಶಿಂಧೆ, ಭಕ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.