ಹೊರ್ತಿ:ಇಲ್ಲಿನ ಹೊರ್ತಿ ಕೆರೆ ತುಂಬಿ ಬಿರುಕು ಬಿಟ್ಟು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶ ಹಾಗೂ ಶಾಸಕರ ಸೂಚನೆ ಮೂಲಕ ಗುರುವಾರ ವಿಜಯಪುರ ಕೆಬಿಜೆಎನ್ ಎಲ್ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು 3ಜೆಸಿಬಿ
ಹೊರ್ತಿ: ಇಲ್ಲಿನ ಹೊರ್ತಿ ಕೆರೆ ತುಂಬಿ ಬಿರುಕು -ಬಿಟ್ಟು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶ ಹಾಗೂ ಶಾಸಕರ ಸೂಚನೆ ಮೇರೆಗೆ ಗುರುವಾರ ವಿಜಯಪುರ ಕೆಬಿಜೆಎನ್‌ಎಲ್ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು 3 ಜೆಸಿಬಿ ಮೂಲಕ ಕೆರೆಯ ಸಾಂಡ ಪಕ್ಕದಿಂದ, 5 ಮೀಟರ್ ಬಲ ಅಂತರದಲ್ಲಿ ಹರಿ ಕಡಿದು, ಅದರ ಮೂಲಕ ಕೆರೆಯಲ್ಲಿನ 5 ಅಡಿ ನೀರು ಕಡಿಮೆ ಮಾಡಿದರು.
ಈ ಕೆರೆಯ ನೀರು ಹಳ್ಳಕ್ಕೆ ಹರಿ ಬಿಟ್ಟಿದ್ದರಿಂದ ಹಳ್ಳದ ಪಕ್ಕದ ಹೊಲಗಳಿಗೆ ನೀರು ನುಗ್ಗಿ, ಒಡ್ಡು ಒಡೆದು ತುಂಬಾ ಹಾನಿ ಉಂಟು ಮಾಡಿದೆ. ಈ ಕೆರೆ ಬಿರುಕು ಬಿದ್ದು ಕುಸಿಯಲು ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯ ಕಾರಣ ಹೊರ್ತಿ ರೈತರು ಆರೋಪಿಸಿದ್ದಾರೆ.
ಈ ವೇಳೆ, ಕೆಬಿಜೆಎನ್ ಎಲ್ ನ ವಿಜಯಪೂರ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿವಾಹಕ ಎಂಜಿನಿಯರ ಎಸ್ ಎಸ್.ಕೊಳ್ಳಿ , ಸಹಾಯಕ ಎಂಜಿನಿಯರ ಸಂದೀಪ ಕುಡ್ಲೂರ, ಬಳ್ಳೊಳ್ಳಿ ಉಪತಹಶೀಲ್ದಾರ ಎ ಎಸ್ ಗೋಟ್ಯಾಳ, ಕಂದಾಯ ನೀರಿಕ್ಷಕ ಪಿ ಜೆ.ಕೊಡಹೊನ್ನ, ಗ್ರಾಮ ಆಡಳಿತಾಧಿಕಾರಿ ವೈ ಎಲ್. ಪೂಜಾರಿ, ಹೊರ್ತಿಯ ಪ್ರಗತಿಪರ ರೈತ ಅಣ್ಣಪ್ಪ ಎಸ್.ಖೈನೂರ ಹಾಗೂ ಕೆರೆಯ ಹಿಂದಿನ ಜಮೀನುಗಳ ರೈತರು ಮತ್ತು ಗ್ರಾಮಸ್ಥರು ಇದ್ದರು.
'ಕೆರೆಯ ಕೆಳಗಿನ ಜಮೀನುಗಳಿಗೆ ತೊಂದರೆ ಆಗದ ಹಾಗೇ ನೀರು ಹರಿ ಬೀಡುವ ವ್ಯವಸ್ಥೆ ಮಾಡಿಸಲಾಗಿದೆ'ಎಂದು ಹೊರ್ತಿಯ ಪ್ರಗತಿಪರ ರೈತ ಅಣ್ಣಪ್ಪ ಎಸ್.ಖೈನೂರ ಹೇಳಿದರು
ಕೆರೆ ಕುಸಿಯಲು ಸಣ್ಣ ನೀರಾವರಿ ಇಲಾಖೆ ಕಾರಣ: ಈ ಕೆರೆಯ ನೀರು ಹಳ್ಳಕ್ಕೆ ಹರಿ ಬಿಟ್ಟಿದ್ದರಿಂದ ಹಳ್ಳದ ಪಕ್ಕದ ಹೊಲಗಳಿಗೆ ನೀರು ನುಗ್ಗಿ, ಒಡ್ಡು ಒಡೆದು ತುಂಬಾ ಹಾನಿಯನ್ನುಂಟು ಮಾಡಿದೆ ಈ ಕೆರೆ ಏರಿ ಬಿರುಕು ಬಿಟ್ಟಿದ್ದು ಕೆರೆ ಕುಸಿಯಲು ವಿಜಯಪೂರ ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯ ಕಾರಣ ಹೊರ್ತಿ ರೈತರು ಆರೋಪಿಸಿದ್ದಾರೆ.
ಠಹೊರ್ತಿ ಕೆರೆ ತುಂಬಿ ಏರಿ ಬಿರುಕು ಬಿಟ್ಟು ಕುಸಿಯುತ್ತಿರುವುದರ ನಿಮ್ಮ ನಿರ್ಲಕ್ಷ್ಯವೇ ಕಾರಣ ಎಂದು ಕೇಳಿದಾಗ ನಾನು ಬಂದು ಎರಡು ತಿಂಗಳಾಗಿದೆ. ಇದರ ಕುರಿತು ನನಗೆ ಎನು ಗೊತ್ತಿಲ್ಲ. ಇನ್ನು ಮುಂದೆ ಈ ಕೆರೆ ದುರಸ್ಥಿಗೆ ಕ್ರಮ ಕೈಗೊಳ್ಳುವುದಾಗಿ ವಿಜಯಪೂರ ಕೆಬಿಜೆಎನ್ ಎಲ್ ನ ಸಹಾಯಕ ಎಂಜಿನಿಯರ ಸಂದೀಪ ಕುಡ್ಲೂರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.