ಆಲಮಟ್ಟಿ: ಆಲಮಟ್ಟಿ ಜಲಾಶಯಕ್ಕೆ ಭಾನುವಾರ ಒಂದೇ ದಿನ 34,939 ಕ್ಯುಸೆಕ್ (3.018 ಟಿಎಂಸಿ ಅಡಿ) ನೀರು ಹರಿದು ಬಂದಿದೆ.
ಮುಂಗಾರು ಪೂರ್ವ ಮಳೆಯಿಂದಾಗಿಯೇ ಆಲಮಟ್ಟಿ ಜಲಾಶಯಕ್ಕೆ ಮೇ 19 ರಿಂದಲೇ ಒಳಹರಿವು ಪ್ರಾರಂಭವಾಗಿತ್ತು. ಭಾನುವಾರ ಮಾತ್ರ ಒಳಹರಿವಿನಲ್ಲಿ ಭಾರಿ ಏರಿಕೆಯಾಗಿದೆ. ಪ್ರತಿ ಬಾರಿ ಜೂನ್ ನಲ್ಲಿ ಈ ರೀತಿಯ ಭಾರಿ ಒಳಹರಿವು ಬರುತ್ತಿತ್ತು. ಆದರೆ ಈ ಬಾರಿ ಮಾತ್ರ ಮೇ ತಿಂಗಳಲ್ಲಿಯೇ ಈ ರೀತಿಯ ಒಳಹರಿವು ಬಂದಿದ್ದು ವಿಶೇಷ.
ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿನ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿಯುವ ಭಾರಿ ಮಳೆಯಿಂದಾಗಿಯೇ ಆಲಮಟ್ಟಿ ಜಲಾಶಯಕ್ಕೆ ಭಾರಿ ನೀರು ಹರಿದು ಬಂದು ಜಲಾಶಯ ಬಹುತೇಕ ಭರ್ತಿಯಾಗುತ್ತದೆ. ಆದರೆ ಇನ್ನೂ ಮಹಾರಾಷ್ಟ್ರದ ನೀರು ಕರ್ನಾಟಕಕ್ಕೆ ಹರಿದು ಬಂದಿಲ್ಲ. ಇದು ಕರ್ನಾಟಕದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿನ ಸುರಿಯುತ್ತಿರುವ ಮಳೆಯ ಒಳಹರಿವು. ಸೋಮವಾರ ಒಳಹರಿವು ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.