ADVERTISEMENT

ವಾಹನಗಳ ಸಂಚಾರಕ್ಕೆ ವೇಗ ಮಿತಿ ಅಳವಡಿಸಿ: ಡಿವೈಎಸ್ಪಿ ಬಲ್ಲಪ್ಪ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 4:26 IST
Last Updated 13 ಜನವರಿ 2026, 4:26 IST
ಬಸವನಬಾಗೇವಾಡಿ ಪಟ್ಟಣದಲ್ಲಿ ವಾಹನಗಳ‌ ಸಂಚಾರಕ್ಕೆ ವೇಗ ಮಿತಿ‌ ಅಳವಡಿಸುವಂತೆ ವಿವೇಕ ಬ್ರಿಗೇಡ್ ಸಂಘಟನೆಯ ಪ್ರಮುಖರು ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಅವರಿಗೆ‌ ಮನವಿ ಸಲ್ಲಿಸಿದರು. ಈ ವೇಳೆ ಪೊಲೀಸ್ ಇನ್ಸಪೆಕ್ಟರ್ ಗುರುಶಾಂತ ದಾಶ್ಯಾಳ ಉಪಸ್ಥಿತರಿದ್ದರು.
ಬಸವನಬಾಗೇವಾಡಿ ಪಟ್ಟಣದಲ್ಲಿ ವಾಹನಗಳ‌ ಸಂಚಾರಕ್ಕೆ ವೇಗ ಮಿತಿ‌ ಅಳವಡಿಸುವಂತೆ ವಿವೇಕ ಬ್ರಿಗೇಡ್ ಸಂಘಟನೆಯ ಪ್ರಮುಖರು ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಅವರಿಗೆ‌ ಮನವಿ ಸಲ್ಲಿಸಿದರು. ಈ ವೇಳೆ ಪೊಲೀಸ್ ಇನ್ಸಪೆಕ್ಟರ್ ಗುರುಶಾಂತ ದಾಶ್ಯಾಳ ಉಪಸ್ಥಿತರಿದ್ದರು.   

ಬಸವನಬಾಗೇವಾಡಿ: ಪಟ್ಟಣದಲ್ಲಿ ವಾಹನಗಳ ಅತಿ ವೇಗ ಸಂಚಾರ ನಿಯಂತ್ರಿಸಲು ಹಾಗೂ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಾಹನಗಳ ವೇಗ ಮಿತಿ ನಿಗದಿಪಡಿಸುವಂತೆ ವಿವೇಕ ಬ್ರಿಗೇಡ್ ಸಂಘಟನೆಯಿಂದ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಅವರಿಗೆ ಮನವಿ ಸಲ್ಲಿಸಲಾಯಿತು.

ಬಸವನಬಾಗೇವಾಡಿ ಪಟ್ಟಣದಲ್ಲಿ ಜನಸಂದಣಿ ಹಾಗೂ ವಾಹನಗಳ ಸಂಚಾರ ಹೆಚ್ಚಾಗಿದೆ. ವಿಶೇಷವಾಗಿ ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ನಡೆದಾಡುವ ಸ್ಥಳಗಳಲ್ಲಿ ವಾಹನಗಳು ಅತಿ ವೇಗವಾಗಿ ಸಂಚರಿಸುತ್ತಿದ್ದು, ನಿತ್ಯ ಅಪಘಾತಗಳು ಸಾಮಾನ್ಯವಾಗಿವೆ. ಹಾಗಾಗಿ ಪಟ್ಟಣ ವ್ಯಾಪ್ತಿಯಲ್ಲಿ ಬರುವ ತಹಶೀಲ್ದಾರ್ ಕಚೇರಿಯಿಂದ ವಿಜಯಪುರ ರಸ್ತೆಯಲ್ಲಿರುವ ಬಸವೇಶ್ವರ ಮಹಾವಿದ್ಯಾಲಯದ ವರೆಗೆ ಮತ್ತು ಮಹಾತ್ಮ ಬಸವೇಶ್ವರ ವೃತ್ತದಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ವಾಹನಗಳ ಚಾಲನೆ ಮಿತಿ ಗಂಟೆಗೆ 40 ಕಿ.ಮೀ. ಅಳವಡಿಸಬೇಕು. ಹೆಚ್ಚಿನ ಜನದಟ್ಟಣೆ ಪ್ರದೇಶಗಳಾದ ಬಸವೇಶ್ವರ ದೇವಾಲಯ, ಬಸ್ ನಿಲ್ದಾಣ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ತಾಲ್ಲೂಕು ಸರ್ಕಾರಿ ಆಸ್ಪತ್ರೆ, ಅರಳಿಕಟ್ಟಿ ಹಾಗೂ ಬಸವ ಭವನ ಹತ್ತಿರ ಜೀಬ್ರಾ ಕ್ರಾಸ್‌ಗಳನ್ನು ಹಾಕಿಸಿ ಅಪಘಾತಗಳನ್ನು ತಡೆಗಟ್ಟಬೇಕೆಂದು ಮನವಿಯಲ್ಲಿ ಕೋರಲಾಗಿದೆ.

ಈ ವೇಳೆ ಪೊಲೀಸ್ ಇನ್ಸಪೆಕ್ಟರ್ ಗುರುಶಾಂತ ದಾಶ್ಯಾಳ ಉಪಸ್ಥಿರಿದ್ದರು. ವಿವೇಕ ಬ್ರಿಗೇಡ್ ಸಂಘಟನೆಯ ಪ್ರಮುಖರಾದ ವಿನೂತ ಕಲ್ಲೂರ, ಶಂಕರ್ ಬೈಕೋಳ, ರವಿ ಚಿಕ್ಕೊಂಡ, ಶಶಿಕಾಂತ್ ಸ್ಥಾವರಮಠ, ಪ್ರಜ್ವಲ್ ಕಾರಕೂನ, ಗಂಗಾಧರ ಅರಿಯರ, ದಯಾನಂದ್ ಸಾರವಾಡ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.