ಇಂಡಿ: ಆಯುಷ್ಮಾನ್ ಭಾರತ್ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆಯಡಿ ಬಡ ಮತ್ತು ದುರ್ಬಲ ಕುಟುಂಬಕ್ಕೆ ₹5 ಲಕ್ಷವರೆಗೆ ಆರೋಗ್ಯ ರಕ್ಷಣೆ ಒದಗಿಸಲಾಗುತ್ತಿದೆ. ಇದರ ಸದುಪಯೋಗ ಪಡೆಯಬೇಕು’ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ನಟರಾಜ ತಿಳಿಸಿದರು.
ಇಂಡಿ ಪಟ್ಟಣದ ಜಿ.ಆರ್.ಗಾಂಧಿ ಕಲಾ ಮಹಾವಿದ್ಯಾಲಯದ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಬಿ.ಜಾಧವ ಮಾತನಾಡಿ, ‘ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಮಾಡಿಸಬೇಕು. ಇದರ ಉಪಯೋಗವು ಪ್ರತಿಯೊಂದು ಕುಟುಂಬಕ್ಕೆ ತಲುಪುವಂತೆ ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಂಪ್ಯೂಟರ್ ಆಪರೇಟರ್ ಮದೀನಾ ಇಂಡಿಕರ, ಬೌರಮ್ಮ ಗುಡ್ಲ, ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಆನಂದ ನಡವಿನಮನಿ, ವಿಶ್ವಾಸ ಕೊರವಾರ, ಶ್ರೀಶೈಲ, ಜಯಪ್ರಸಾದ ಡಿ, ಮಲ್ಲಿಕಾರ್ಜುನ ಕೊಣದೆ, ಶ್ರುತಿ ಪಾಟೀಲ, ಶ್ವೇತಾ ಕಾಂತ, ಶ್ರುತಿ ಬಿರಾದಾರ, ಪರಶುರಾಮ ಅಜಮನಿ, ಬಿ.ಎಚ್. ಬಗಲಿ, ಸುರೇಂದ್ರ ಕೆ., ಪಿ.ಕೆ.ರಾಠೋಡ, ಸಿ.ಎಸ್. ಬಿರಾದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.