ADVERTISEMENT

ಇಂಡಿ | ಎಸಿ  ಭೇಟಿ: ಅಹೋರಾತ್ರಿ ಹೋರಾಟ ಅಂತ್ಯ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 14:02 IST
Last Updated 10 ಏಪ್ರಿಲ್ 2025, 14:02 IST
ಇಂಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಳೆದ ನಾಲ್ಕು ದಿವಸಗಳಿಂದ ನಡೆದ ಹೋರಾಟದ ಸ್ಥಳಕ್ಕೆ ಗುರುವಾರ ಎಸಿ ಅನುರಾಧಾ ವಸ್ತ್ರದ ಬೇಟಿ ನೀಡಿ ಮಾತನಾಡಿ, ಬೇಡಿಕೆಗಳ ಬಗ್ಗೆ ಭರವಸೆ ನೀಡಿದ ನಿಮಿತ್ಯ ಹೋರಾಟ ಅಂತ್ಯಗೊಳಿಸಿದರು.    
ಇಂಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಳೆದ ನಾಲ್ಕು ದಿವಸಗಳಿಂದ ನಡೆದ ಹೋರಾಟದ ಸ್ಥಳಕ್ಕೆ ಗುರುವಾರ ಎಸಿ ಅನುರಾಧಾ ವಸ್ತ್ರದ ಬೇಟಿ ನೀಡಿ ಮಾತನಾಡಿ, ಬೇಡಿಕೆಗಳ ಬಗ್ಗೆ ಭರವಸೆ ನೀಡಿದ ನಿಮಿತ್ಯ ಹೋರಾಟ ಅಂತ್ಯಗೊಳಿಸಿದರು.       

ಇಂಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತೊಗರಿ ಬೆಳೆಗೆ ಪರಿಹಾರ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯಿಂದ ಕೃಷಿಗೆ ನೀರು ಬಿಡುವ ಕುರಿತು ನಡೆದಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಗುರುವಾರ ಕಂದಾಯ ಉಪ ವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಮತ್ತು ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ ಭೇಟಿ ನೀಡಿ ನೀರು ಬಿಡುವ ಬಗ್ಗೆ ಭರವಸೆ ನೀಡಿದ್ದರಿಂದ ಹೋರಾಟ ಅಂತ್ಯಗೊಳಿಸಲಾಗಿದೆ ಎಂದು ಕರವೇ ಅಧ್ಯಕ್ಷ ಬಾಳು ಮುಳಜಿ ಹೇಳಿದರು.

ಎಸಿ ಅನುರಾಧಾ ವಸ್ತ್ರದ ಮಾತನಾಡಿ, ನೀವು ಮನವಿ ಕೊಡಿ ನಾವು ಅದನ್ನು ಜಿಲ್ಲಾಧಿಕಾರಿಗಳಿಗೆ ಮುಟ್ಟಿಸುತ್ತೇವೆ ಮತ್ತು ಜಿಲ್ಲಾಧಿಕಾರಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುತ್ತಾರೆ ಮತ್ತು ಶಾಸಕರಿಗೂ ಈ ವಿಷಯದ ಕುರಿತು ಮಾಹಿತಿ ನೀಡುತ್ತೇವೆ. ಪ್ರಾಮಾಣಿಕವಾಗಿ ರೈತರಿಗೆ ನ್ಯಾಯ ಒದಗಿಸಿ ಕೊಡುತ್ತೇವೆ ಎಂಬ ಭರವಸೆ ನೀಡಿದ ಬಳಿಕ ರೈತರು ಮತ್ತು ಕರವೇ ಹೋರಾಟಗಾರರು ಧರಣಿ ಹಿಂದೆ ಪಡೆದರು.

ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ,  ಕೃಷ್ಣಾ ಮೇಲ್ದಂಡೆ ಯೋನೆಯ ನೀರಾವರಿ ಅಧಿಕಾರಿ ಎಇಇ ವಿಜಯಕುಮಾರ ಮಾತನಾಡಿದರು.

ADVERTISEMENT

ಮಹೇಶ ಹೂಗಾರ, ಧರ್ಮರಾಜ ಸಾಲೋಟಗಿ, ಮಂಜು ದೇವರ, ಪ್ರಶಾಂತ ಲಾಳಸಂಗಿ,ಮಲ್ಲು ಗುಡ್ಲ, ಭೀಮಾಶಂಕರ ಆಳೂರ, ಪ್ರಶಾಂತ ಗೌಳಿ. ಭಾಗೇಶ ಮಲಘಾಣ, ಸಚೀನ ನಾವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.