ADVERTISEMENT

ಬಬಲೇಶ್ವರ ಪಾಕಿಸ್ತಾನದಲ್ಲಿ ಇದೆಯಾ: ಸವದಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 16:08 IST
Last Updated 7 ಆಗಸ್ಟ್ 2022, 16:08 IST
ನಾಗಠಾಣದಲ್ಲಿ ಭಾನುವಾರ ನಡೆದ ನೂತನ ಬಸ್‌ ನಿಲ್ದಾಣ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವ ಗೋವಿಂದ ಕಾರಜೋಳ ಮತ್ತು ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಅವರಿಗೆ ಬಿಜೆಪಿ ಮುಖಂಡರು ಬೆಳ್ಳಿಯ ಖಡ್ಗ ನೀಡಿ ಸನ್ಮಾನಿಸಿದರು–ಪ್ರಜಾವಾಣಿ ಚಿತ್ರ
ನಾಗಠಾಣದಲ್ಲಿ ಭಾನುವಾರ ನಡೆದ ನೂತನ ಬಸ್‌ ನಿಲ್ದಾಣ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವ ಗೋವಿಂದ ಕಾರಜೋಳ ಮತ್ತು ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಅವರಿಗೆ ಬಿಜೆಪಿ ಮುಖಂಡರು ಬೆಳ್ಳಿಯ ಖಡ್ಗ ನೀಡಿ ಸನ್ಮಾನಿಸಿದರು–ಪ್ರಜಾವಾಣಿ ಚಿತ್ರ   

ವಿಜಯಪುರ: ಬಬಲೇಶ್ವರ ವಿಧಾನಸಭಾ ಕ್ಷೇತ್ರವೇನು ಪಾಕಿಸ್ತಾನದಲ್ಲಿ ಇದೆಯಾ? ಅದು ಕರ್ನಾಟಕ ರಾಜ್ಯದಲ್ಲಿ ಇದೆ ತಾನೇ?

ಹೀಗೆಂದು ಪ್ರಶ್ನಿಸಿದವರು ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ.ನಾಗಠಾಣದಲ್ಲಿ ಭಾನುವಾರ ನಡೆದ ನೂತನ ಬಸ್‌ ನಿಲ್ದಾಣ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಬಲೇಶ್ವರ ಕ್ಷೇತ್ರದಿಂದ ನೀವು ಸ್ಪರ್ಧಿಸುತ್ತೀರಿ ಎಂಬ ಮಾತು ಕೇಳಿಬರುತ್ತಿದೆ ನಿಜಾನಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು.

’ನಾನು ಸದ್ಯ ವಿಧಾನ ಪರಿಷತ್‌ ಸದಸ್ಯ. ಇನ್ನೂ ಆರು ವರ್ಷ ಅವಧಿ ಇದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಬಲೇಶ್ವರ ಅಥವಾಅಥಣಿ ಅಥವಾ ಜಮಖಂಡಿ ಸೇರಿದಂತೆ ಯಾವುದಾದರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಪಕ್ಷ ಸೂಚಿಸಿದರೆ ಖಂಡಿತಾ ಸ್ಪರ್ಧಿಸುತ್ತೇನೆ. ಪಕ್ಷದ ತೀರ್ಮಾನಕ್ಕೆ ಬಿಟ್ಟ ವಿಷಯ. ಅಲ್ಲಿಯ ವರೆಗೆ ಪಕ್ಷದ ಕೆಲಸ ಮಾಡಿಕೊಂಡು ಮುಂದುವರಿಯುತ್ತೇನೆ’ ಎಂದರು.

ADVERTISEMENT

ದಲಿತ ಸಿ.ಎಂ ಚರ್ಚೆ ಅನಗತ್ಯ

‘ದಲಿತರಿಗೊಬ್ಬ ಮುಖ್ಯಮಂತ್ರಿ, ಮುಂದುವರಿದವರಿಗೊಬ್ಬ ಮುಖ್ಯಮಂತ್ರಿ ಎಂಬುದಿಲ್ಲ. ರಾಜ್ಯದ ಆರೂವರೆ ಕೋಟಿ ಜನತೆಗೆ ಒಬ್ಬ ಮುಖ್ಯಮಂತ್ರಿ ಇರುತ್ತಾರೆ. ಈ ಬಗ್ಗೆ ಚರ್ಚೆ ಅನಗತ್ಯ’ ಎಂದುಸಚಿವ ಗೋವಿಂದ ಕಾರಜೋಳ ಹೇಳಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಜೊತೆಗೆ ಕೇಂದ್ರದಲ್ಲೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾಗಠಾಣ ಕ್ಷೇತ್ರಕ್ಕೆ ಬಿಜೆಪಿಯಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬುದನ್ನು ಪಕ್ಷ ತೀರ್ಮಾನಿಸಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.