ADVERTISEMENT

ಜೆಡಿಎಸ್‌ನದ್ದು ಸೂಟ್‌ಕೇಸ್‌ ರಾಜಕಾರಣ: ಜಮೀರ್

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 15:21 IST
Last Updated 23 ಅಕ್ಟೋಬರ್ 2021, 15:21 IST
ತಾಂಬಾ ಗ್ರಾಮದಲ್ಲಿ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಮಾತನಾಡಿದರು
ತಾಂಬಾ ಗ್ರಾಮದಲ್ಲಿ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಮಾತನಾಡಿದರು   

ತಾಂಬಾ(ವಿಜಯಪುರ): ಜಾತ್ಯತೀತ ರಾಜಕಾರಣ ಮಾಡುವ ಯಾವುದಾದರೂ ಪಕ್ಷ ದೇಶದಲ್ಲಿದ್ದರೆ ಅದು ಕಾಂಗ್ರೆಸ್‌ ಮಾತ್ರ. ಜೆಡಿಎಸ್‌ನದ್ದು ಸೂಟ್‌ಕೇಸ್‌ ರಾಜಕಾರಣ ಮಾಡುತ್ತಿದೆ. ಹೀಗಾಗಿಯೇ ಹಾನಗಲ್‌ ಕ್ಷೇತ್ರಕ್ಕೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಇನ್ನೂವರೆಗೂ ಹೋಗಿಲ್ಲ. ಅಲ್ಲಿಂದ ಜೆಡಿಎಸ್‌ಗೆ ಯಾವುದೇ ಸೂಟ್‌ಕೇಸ್‌ ಬಂದಿಲ್ಲ ಶಾಸಕ ಜಮೀರ್ ಅಹ್ಮದ್ ಖಾನ್ ಆರೋಪಿಸಿದರು.

ತಾಂಬಾ ಗ್ರಾಮದಲ್ಲಿ ಸಿಂದಗಿ ಉಪಚುನಾವಣೆಯ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಪರ ಶನಿವಾರ ಮತಯಾಚಿಸಿ ಅವರು ಮಾತನಾಡಿದರು.

ಅಚಾನಕ್ಕಾಗಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಹಜ್ ಕಾರ್ಯಕ್ರಮಕ್ಕೆ ಬಂದಿಲ್ಲ. ಟಿಪ್ಪು ಸುಲ್ತಾನ್ ಜಯಂತಿಯು ವಿಧಾನಸೌಧದಲ್ಲಿ ಆಚರಣೆ ಮಾಡಲಿಲ್ಲ ಯಾಕೆ ಎಂದು ಪ್ರಶ್ನಿಸಿದರು.

ADVERTISEMENT

ಹಿಂದೆ ಎಐಎಂಐಎಂ ಪಕ್ಷವು ಬಿಜೆಪಿಯ ಬಿ–ಟೀಂ ಆಗಿತ್ತು. ಸದ್ಯದ ರಾಜ್ಯ ರಾಜಕೀಯದಲ್ಲಿ ಜೆಡಿಎಸ್ ಬಿ–ಟೀಂ ಆಗಿದೆ ಎಂದು ಟೀಕಿಸಿದರು.

ಮಾಜಿ ಸಚಿವ ಯು.ಟಿ. ಖಾದರ್ ಮಾತನಾಡಿ, ಕಾಂಗ್ರೆಸ್ ಪಕ್ಷವು ಎಲ್ಲ ಜನಾಂಗದ ವರ್ಗಗಳಿಗೆ ಸಮಾನತೆ ನೀಡುವ ಪಕ್ಷವಾಗಿದೆ ಎಂದು ಹೇಳಿದರು.

ಹಮ್ಮಿದ್‌ ಮುಸ್ರಿಪ್, ನಾಸಿರಹುಸೇನ, ರಹಿಮಾನ ಖಾನ್‌, ಜಿ ಎ ಬಾವಾ, ಇಲಿಯಾಸ್‌ ಬೋರಾಮಣಿ, ಜಾವಿದ್‌ ಮೋಮಿನ್‌, ಮಹ್ಮದ್‌ ವಾಲಿಕಾರ, ಇರ್ಫಾನ್‌ ಶೇಖ್‌, ಫತ್ತುಸಾಬ ಉಜನಿ, ಫಾರೂಖ್‌ ಮುಲ್ಲಾ, ಪರಸರಾಮ ಬಿಸನಾಳ, ಅಪ್ಪಣ್ಣ ಕಲ್ಲೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.