ಇಂಡಿ: ತಾಲ್ಲೂಕಿನ ಆಳೂರ ಗ್ರಾಮದಲ್ಲಿ ಅಕ್ಟೋಬರ್ 11, 12 ಮತ್ತು 13 ರಂದು ಸಿದ್ದಾರೂಢರ ನೂತನ ಮಂದಿರದ ಕಳಸಾರೋಹಣ, ಸಿದ್ದಾರೂಢರ ಗುಂಡಪ್ಪ ಮಹಾರಾಜರ ಮಾತೋಶ್ರೀ ಲಕ್ಷ್ಮೀಬಾಯಿ ತಾಯಿ, ಪಾರ್ವತಿ ಅಮ್ಮನವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ 55ನೇ ವರ್ಷದ ಆಧ್ಯಾತ್ಮಿಕ ಪ್ರವಚನ ಮಹೋತ್ಸವ ಹಾಗೂ ಮಠದ 50 ನೇ ವರ್ಷದ ಸುವರ್ಣ ಮಹೋತ್ಸವ ಮತ್ತು ದೀಪೋತ್ಸವ ಕಾರ್ಯಕ್ರಮಗಳು ನಡೆಯಲಿವೆ.
11 ರಂದು ಮೆರವಣೆಗೆ, 12 ರಂದು ಸಿದ್ದಾರೂಢರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, 13 ರಂದು ಬೀದರ್ ಶ್ರೀಗಳ ಮಹಾಪೂಜೆ ನಡೆಯುವವು. 13 ರಿಂದ ಸಾಯಂಕಾಲ ಜಗದ್ಗುರು ಸಿದ್ದಾರೂಢರ ಪುರಾಣ ಪ್ರಾರಂಭ ಮಾತೋಶ್ರೀ ಜ್ಞಾನೇಶ್ವರಿ ಅವರಿಂದ ನಡೆಯುತ್ತಿದ್ದು, ಅಕ್ಟೋಬರ್ 10 ರಂದು ಸಾಯಂಕಾಲ 10 ಗಂಟೆಗೆ 555 ಮುತ್ಯೈದೆಯರ ಉಡಿ ತುಂಬುವ ಕಾರ್ಯಕ್ರಮ ಇದೆ. ಅಕ್ಟೋಬರ್ 12 ರಂದು ಬೆಳಿಗ್ಗೆ 9 ರಿಂದ 5 ಗಂಟೆಯ ವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯುವವು.
ಇಂಚಲದ ಶಿವಾನಂದ ಭಾರತಿ ಸ್ವಾಮೀಜಿ, ಬಂಥನಾಳ -ಲಚ್ಯಾಣ ಗ್ರಾಮಗಳ ಪೀಠಾಧಿಪತಿ ವೃಷಭಲಿಂಗೇಶ್ವರ ಸ್ವಾಮೀಜಿ, ಹುಬ್ಬಳ್ಳಿಯ ಅಭಿನವ ಸಿದ್ದಾರೂಢ ಸ್ವಾಮೀಜಿ, ಬೆಂಗಳೂರಿನ ಮಂಜುನಾಥ ಸ್ವಾಮೀಜಿ, ಮುಚಳಂಬದ ಪ್ರಣವಾನಂದ ಸ್ವಾಮೀಜಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಶಾಸಕ ವಿಠ್ಠಲ ಕಟಕದೊಂಡ, ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಶಾಸಕ ಲಕ್ಷ್ಮಣ ಸವದಿ, ದೇವರ ಹಿಪ್ಪರಗಿ ಶಾಸಕ ಭೀಮನಗೌಡ ಪಾಟೀಲ ಸೇರಿದಂತೆ ಅನೇಕ ಗಣ್ಯರು, ಪೂಜ್ಯರು ಆಗಮಿಸುವರು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.