ಕಮಲಾಪುರ: ‘ನೂರಾರು ವರ್ಷಗಳ ಹಿಂದೆಯೆ ದೊಡ್ಡ ಶೈಕ್ಷಣಿಕ ಸಂಸ್ಥೆ ಸ್ಥಾಪಿಸಿ ಅನ್ನ ಅಕ್ಷರ ದಾಸೋಹ ನಡೆಸಿದ ಶರಣಬಸವಪ್ಪ ಅಪ್ಪ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಗುರು ಮಾಟೂರ ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ ನಿಧನ ಹಿನ್ನೆಲೆ ಪಟ್ಟಣದಲ್ಲಿ ಶುಕ್ರವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಶರಣಬಸವೇಶ್ವರ ಸಂಸ್ಥಾನದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ದೇಶ, ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳೆಯರು, ಬಡವರಿಗೆ ಉಚಿತ ಶಿಕ್ಷಣದ ಜೊತೆಗೆ ಸಾವಿರಾರು ಜನರಿಗೆ ಅವರ ಸಂಸ್ಥಾನದಲ್ಲಿ ಉದ್ಯೋಗ ಒದಗಿಸಿದ್ದಾರೆ. ಅಪ್ಪ ಅವರ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ’ ಎಂದರು.
ಬಸವೇಶ್ವರ ವೃತ್ತದಿಂದ ಬಸ್ ನಿಲ್ದಾಣ ಪ್ರದೇಶದ ವರಗೆ ಶರಣಬಸವಪ್ಪ ಅಪ್ಪ ಅವರ ಭಾವಚಿತ್ರ ಮೆರವಣಿಗೆ ನಡೆಯಿತು. ವಿವಿಧ ರಾಜಕೀಯ ಮುಖಂಡರು, ಸಾರ್ವಜನಿಕರು ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ತಹಶೀಲ್ದಾರ್ ಮೊಹಮ್ಮದ್ ಮೋಸಿನ ಅಹಮ್ಮದ್, ಶಿವಕುಮಾರ ದೋಶೆಟ್ಟಿ, ಅಮರ ಚಿಕ್ಕೆಗೌಡ, ಉದಯ ಪಾಟೀಲ, ಸಂತೋಷ ರಾಂಪೂರ, ಶರಣು ರಟಕಲ್, ಬಸವರಾಜ ಚಿಕ್ಕೆಗೌಡ, ಅಶೋಕ ಸುಗೂರ, ಸಿದ್ದು ಕಶೆಟ್ಟಿ, ಬಸವರಾಜ ಸುಗೂರ, ಮೈನೋದ್ದಿನ ಗುಳಿ, ಚೆನ್ನಬಸಪ್ಪ ಮುನ್ನಳ್ಳಿ, ಆನಂದ ವಾರಿಕ, ಸುರೇಶ ರಾಠೋಡ, ನಾಗರಾಜ ಹುಣಚಿಗಿಡ, ಸಂತೋಷ ಕಲ್ಯಾಣ, ಗುರು ಬಮ್ಮಣ, ನಟರಾಜ ಕಲ್ಯಾಣ, ಶರಣಬಸಪ್ಪ ಜೀವಣಗಿ ಸಂತೋಷ ಮುಗಳಿ, ಅಮೃತ ಗೌರೆ, ಶರಣು ಗೌರೆ, ಗಿರೆಪ್ಪ ಶಾಖಾ, ರವಿ ಬಿ.ಕೆ., ಅಶೋಕ ಗೌರೆ, ಹಿತೇಶ, ಆನಂದ ಚಿನ್ನಿರಾಠೋಡ ಮತ್ತಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.