ವಿಜಯಪುರ: ‘ಸಂಘಟನೆಗಳು ಕೇವಲ ಹುಟ್ಟು ಹಾಕುವುದಲ್ಲ, ಸಂಘಟನೆಗಳಿಂದ ಸಮಾಜದ ಓರೆ-ಕೊರೆಗಳನ್ನು ತಿದ್ದುವ ಕೆಲಸವಾಗಬೇಕು’ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಂ.ಸಿ. ಮುಲ್ಲಾ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ನಡೆದ ಸಾಮ್ರಾಟ್ ಅಶೋಕ ರೆಜಿಮೆಂಟ್ ಅಸೋಸಿಯೇಶನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಂಘಟನೆಗಳು ಸಮಾಜದ ಪ್ರತಿಯೊಬ್ಬ ದೀನ-ದಲಿತರ, ಮಹಿಳೆಯರ, ತುಳಿತಕ್ಕೆ ಒಳಗಾದವರ ಧ್ವನಿಯಾಗಿ ಕೆಲಸ ಮಾಡಬೇಕು. ಅನ್ಯಾಯ ಕಂಡಲ್ಲಿ ನಿಷ್ಠೆ, ಪ್ರಾಮಾಣಿಕತೆಯಿಂದ ನ್ಯಾಯ ಒದಗಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.
ಸಿದ್ದು ಕಲ್ಲೂರ, ಶ್ರೀಕಾಂತ ಅರಕೇರಿ, ಸುಭಾಷ ನಾಯ್ಕೋಡಿ, ಸುರೇಶ ಶೇಡಶ್ಯಾಳ, ಪ್ರಶಾಂತ ಕಿರಣಗಿ, ದಸ್ತಗೀರ ಸಾಲೋಟಗಿ, ಲಕ್ಷ್ಮಣ ಬೆಟಗೇರಿ, ಫಯಾಜ ಕಲಾದಗಿ, ಸಂತೋಷ ಮಂದಕನಳ್ಳಿ, ಅಶೋಕ ಶಿವಶರಣರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.