ವಿಜಯಪುರ: ಹಲಸಂಗಿಮಧುರಚೆನ್ನ ಪ್ರತಿಷ್ಠಾನದಿಂದ ಕೊಡಮಾಡುವ 2020ರ ಸಾಲಿನ ‘ಮಧುರಚೆನ್ನ ಕಾವ್ಯ ಪ್ರಶಸ್ತಿ’ಗೆ ಬೆಳಗಾವಿಯ ಕವಿ ನದೀಮ್ ಸನದಿ ಅವರ‘ಹುಲಿಯ ನೆತ್ತಿಗೆ ನೆರಳು’ ಸಂಕಲನ ಆಯ್ಕೆಯಾಗಿದೆ.
ಪ್ರಶಸ್ತಿಯು ₹ 10 ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ.ಮಧುರಚೆನ್ನರ ಜನ್ಮಸ್ಥಳವಾದ ಹಲಸಂಗಿಯಲ್ಲಿ ಡಿಸೆಂಬರ್ 4 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರತಿಷ್ಠಾನದ ಸಂಚಾಲಕ ಸುಮಿತ್ ಮೇತ್ರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.