ವಿಜಯಪುರ: ಮಂಗಳಮುಖಿಯನ್ನು ರಸ್ತೆ ಮೇಲೆ ಕೆಡವಿ, ಇತರೆ ಮಂಗಳಮುಖಿಯರು ಸುತ್ತುವರಿದು, ಮನಬಂದಂತೆ ಥಳಿಸಿ, ಬಟ್ಟೆ ಹರಿದು ಬೆತ್ತಲೆಗೊಳಿಸಿ, ಕಾರದಪುಡಿ ಎರಚಿ ಅವಾಚ್ಯ ನಿಂದಿಸಿದ್ದಾರೆ. ಹೊಡೆಯದಂತೆ ಪದೇ ಪದೇ ಕೋರಿದರೂ ರೊಚ್ಚಿಗೆದ್ದು ಹಲ್ಲೆ ನಡೆಸಿದ ದೃಶ್ಯಗಳಿವೆ. ಈ ಘಟನೆಗೆ ಕಾರಣವೇನು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಯಾವುದೇ ದೂರು ಕೂಡ ದಾಖಲಾಗಿಲ್ಲ.
‘ಮಂಗಳಮುಖಿಯನ್ನು ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿರುವುದು ಗಮನಕ್ಕೆ ಬಂದಿದೆ. ಇದರ ತನಿಖೆಗೆ ತಂಡ ರಚಿಸಲಾಗಿದೆ. ಸಂತ್ರಸ್ತ ಮಂಗಳಮುಖಿ ಸೇರಿ ಹಲ್ಲೆ ನಡೆಸಿದವರನ್ನು ಪತ್ತೆ ಮಾಡಿ, ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.