ADVERTISEMENT

ಮುದ್ದೇಬಿಹಾಳ | 'ಸಾಮೂಹಿಕ ವಿವಾಹ ಮೇ 18ರಂದು'

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 14:14 IST
Last Updated 16 ಏಪ್ರಿಲ್ 2025, 14:14 IST
ಮಲ್ಲಿಕಾರ್ಜುನ ಮದರಿ
ಮಲ್ಲಿಕಾರ್ಜುನ ಮದರಿ   

ಮುದ್ದೇಬಿಹಾಳ: ‘ಪುತ್ರ ಕಿರಣ ಮದರಿ ಅವರ ವಿವಾಹ ಸಮಾರಂಭದ ಅಂಗವಾಗಿ ಮೇ 18ರಂದು ಸಾಮೂಹಿಕ ವಿವಾಹ ಆಯೋಜಿಸಲಾಗಿದ್ದು, ಆಸಕ್ತರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು’ ಎಂದು ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಎನ್. ಮದರಿ ತಿಳಿಸಿದ್ದಾರೆ.

‘ಉಳ್ಳವರ ಮದುವೆಗಳು ದುಂದುವೆಚ್ಚದಿಂದ ಕೂಡಿರುತ್ತವೆ ಎಂಬ ಅಪವಾದಗಳ ಮಧ್ಯೆ, ಬಡ ಕುಟುಂಬಗಳಿಗೆ ಮದುವೆ ಭಾರವೆನಿಸಬಾರದು ಎಂಬ ಸದುದ್ಧೇಶದಿಂದ ಸಾಮೂಹಿಕ ವಿವಾಹ ಆಯೋಜಿಸಿದ್ದೇವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ವಧು ವರರಿಗೆ ತಾಳಿ, ಕಾಲುಂಗುರ, ಬಟ್ಟೆ ನೀಡಲಾಗುತ್ತದೆ. ದಾಸೋಹ ವ್ಯವಸ್ಥೆ ಇರಲಿದೆ. ಏ.30ರ ಒಳಗಾಗಿ ಹೆಸರು ನೋಂದಾಯಿಸಿಕೊಳ್ಳಬಹುದು’ ಎಂದಿದ್ದಾರೆ.

ADVERTISEMENT

ಸಂಪರ್ಕಕ್ಕೆ: 99805 29772, 99803 94710

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.