
ಪ್ರಜಾವಾಣಿ ವಾರ್ತೆ
ಆಲಮಟ್ಟಿ: ಸ್ಥಳೀಯ ಮಂಜಪ್ಪ ಹರ್ಡೇಕರ ಸ್ಮಾರಕ ಕಲಾ, ವಾಣಿಜ್ಯ ಪದವಿ ಕಾಲೇಜಿನ ಅಂತಿಮ ವರ್ಷದ ಪರೀಕ್ಷೆಗೆ ಕುಳಿತ ಎಲ್ಲ 23 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಅದರಲ್ಲಿ ಉನ್ನತ ದರ್ಜೆಯಲ್ಲಿ ಎಂಟು, ಪ್ರಥಮ ದರ್ಜೆಯಲ್ಲಿ ಹತ್ತು, ದ್ವಿತೀಯ ದರ್ಜೆಯಲ್ಲಿ ಐವರು ತೇರ್ಗಡೆ ಹೊಂದಿದ್ದಾರೆ.
ಅಮೃತ ಬಳ್ಳೊಳ್ಳಿ ಶೇ 90, ಗಾಯತ್ರಿ ಶಿಂಧೆ ಶೇ 88 ಹಾಗೂ ಪಲ್ಲವಿ ಶಿವಣಗಿ ಶೇ 88ರಷ್ಟು ಅಂಕ ಗಳಿಸಿ ಸಾಧನೆ ಮಾಡಿದ್ದಾರೆ ಎಂದು ಪ್ರಾಚಾರ್ಯ ಎಚ್.ಎನ್.ಕೆಲೂರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.