ADVERTISEMENT

​ವಿಜಯಪುರ: ಬಿಜ್ಜರಗಿಯಲ್ಲಿ ಲಘು ಭೂಕಂಪ– 2ರಷ್ಟು ತೀವ್ರತೆ ದಾಖಲು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 15:36 IST
Last Updated 2 ಅಕ್ಟೋಬರ್ 2021, 15:36 IST

ವಿಜಯಪುರ: ತಿಕೋಟಾ ತಾಲ್ಲೂಕಿನ ಬಿಜ್ಜರಗಿಯಲ್ಲಿ ಶನಿವಾರ ಬೆಳಿಗ್ಗೆ 8.31ಕ್ಕೆ ಲಘು ಭೂಕಂಪ ಸಂಭವಿಸಿದೆ. ಕಲಬುರ್ಗಿ ಮತ್ತು ಆಲಮಟ್ಟಿಯಲ್ಲಿರುವ ಭೂಕಂಪನ ಮಾಪಕದಲ್ಲಿ ಭೂಕಂಪದ ತೀವ್ರತೆ 2ರಷ್ಟು ದಾಖಲಾಗಿದೆ. ಭೂಮಿಯ ಒಳಗೆ 10 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಬೆಂಗಳೂರಿನ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ಹವಣ ಕೇಂದ್ರ(ಕೆಎಸ್‌ಎನ್‌ಡಿಎಂಸಿ)ವು ತಿಳಿಸಿದೆ.

ಲಘು ಭೂಕಂಪನವಾಗಿದ್ದು, ಇದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಜನ ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರದ ವಿಜ್ಞಾನಗಳು ತಿಳಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ 1.47ಕ್ಕೆ ಬಸವನ ಬಾಗೇವಾಡಿ ತಾಲ್ಲೂಕಿನ ಮಸೂತಿ ಗ್ರಾಮದಲ್ಲಿ(ತೀವ್ರತೆ 2.5) ಭೂಮಿಯ 15 ಕಿ.ಮೀ. ಆಳದಲ್ಲಿ ಹಾಗೂ ಸಂಜೆ 4.10ಕ್ಕೆ ವಿಜಯಪುರ ನಗರದ ನೈರುತ್ಯ ಭಾಗದಲ್ಲಿ 10 ಕಿ.ಮೀ.ದೂರದಲ್ಲಿ ಭೂಮಿಯ 10ಕಿ.ಮೀ. ಆಳದಲ್ಲಿ ಲಘು ಭೂಕಂಪ(ತೀವ್ರತೆ 2.2) ದಾಖಲಾಗಿತ್ತು.

ADVERTISEMENT

ಜಿಲ್ಲೆಯ ವಿವಿಧೆಡೆ ಐದಾರು ತಿಂಗಳಿಂದ ಆಗಾಗ ಭೂಕಂಪನ ಸಂಭವಿಸುತ್ತಲೇ ಇದ್ದು, ಭೂವಿಜ್ಞಾನಿಗಳು, ಜನ ಭಯ ಪಡುವ ಅಗತ್ಯವಿಲ್ಲ. ಇದೊಂದು ನೈರ್ಗಿಕ ಪ್ರಕ್ರಿಯೆ ಎಂದು ಧೈರ್ಯ ತುಂಬುತ್ತಿದ್ದಾರೆ. ಆದರೆ, ಜನ ಭಯ ಭೀತರಾಗಿದ್ದಾರೆ. ಭೂಕಂಪ ಜಿಲ್ಲೆಯ ಜನತೆಯನ್ನು ಹಗಲಿರುಳು ಕಾಡತೊಡಗಿದೆ. ಯಾವಾಗ ದುರಂತ ಸಂಭವಿಸುತ್ತದೆಯೋ? ಏನಾಗುತ್ತದೆಯೋ? ಎಂಬ ಆತಂಕದಲ್ಲಿ ದಿನ ಕಳೆಯತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.