ADVERTISEMENT

ಸೌರಶಕ್ತಿ ಆಧಾರಿತ ಜೀವನೋಪಾಯಕ್ಕೆ ಮುಂದಾಗಿ: ಶಿವಕುಮಾರ

​ಪ್ರಜಾವಾಣಿ ವಾರ್ತೆ
Published 16 ಮೇ 2025, 14:20 IST
Last Updated 16 ಮೇ 2025, 14:20 IST
ಇಂಡಿ ತಾಲ್ಲೂಕಿನ ಆಳೂರ ಗ್ರಾಮದಲ್ಲಿ ಶುಕ್ರವಾರ ನಡೆದ ಸೌರ ತಂತ್ರಜ್ಞಾನದ ಅನುಷ್ಠಾನ ಮತ್ತು ಅವಿಷ್ಕಾರ ವಿಶೇಷ ಕಾರ್ಯಾಗಾರವನ್ನು ಶಿವಕುಮಾರ. ಕೆ. ಉದ್ಘಾಟಿಸಿದರು
ಇಂಡಿ ತಾಲ್ಲೂಕಿನ ಆಳೂರ ಗ್ರಾಮದಲ್ಲಿ ಶುಕ್ರವಾರ ನಡೆದ ಸೌರ ತಂತ್ರಜ್ಞಾನದ ಅನುಷ್ಠಾನ ಮತ್ತು ಅವಿಷ್ಕಾರ ವಿಶೇಷ ಕಾರ್ಯಾಗಾರವನ್ನು ಶಿವಕುಮಾರ. ಕೆ. ಉದ್ಘಾಟಿಸಿದರು   

ಇಂಡಿ: ‘ಇಂದಿನ ದಿನಮಾನಗಳಲ್ಲಿ ವೃತ್ತಿ, ಪ್ರವೃತ್ತಿಯ ಮಾದರಿಯು ಸ್ವಾವಲಂಬಿ ಸ್ವಉದ್ಯೋಗದ ಮೇಲೆ ಅವಲಂಬಿತವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಯುವ ಜನತೆ ವಲಸೆ ಹೋಗುವದನ್ನು ತಪ್ಪಿಸಿ ಗ್ರಾಮೀಣ ಪ್ರದೇಶದಲ್ಲಿ ಸೌರಶಕ್ತಿ ಆಧಾರಿತ ಜೀವನೋಪಾಯಕ್ಕೆ ಮುಂದಾಗಬೇಕಾಗಿದೆ’ ಎಂದು ಜೀವನೋಪಾಯ ತರಬೇತಿ ವಿಭಾಗದ ವ್ಯವಸ್ಥಾಪಕ ಶಿವಕುಮಾರ. ಕೆ ಹೇಳಿದರು. 

ತಾಲ್ಲೂಕಿನ ಆಳೂರ ಗ್ರಾಮದಲ್ಲಿ ಮಣಿಪಾಲ ಪೇಮೆಂಟ್ ಮತ್ತು ಐಡೆಂಟಿಟಿ ಸೆಲ್ಯೂಷನ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಭಾರತೀಯ ವಿಕಾಸ ಟ್ರಸ್ಟ್‌ ಮಣಿಪಾಲ ಹಾಗೂ ದೀಪಾಲಯ ಸಂಸ್ಥೆ, ಸೆಲ್ಕೋ ಸೋಲಾರ್‌ ಲೈಟರ್‌ ಸಹಯೋಗದಲ್ಲಿ ವಿಕೇಂದ್ರಿಕೃತ ನವೀಕರಿಸಬಹುದಾದ ಶಕ್ತಿ ಕೌಶಲಾಧಾರಿತ ತರಬೇತಿ ಮತ್ತು ಸೌರಶಕ್ತಿಯಾದಾರಿತ ಜೀವನೋಪಾಯಕ್ಕೆ ಅನುಕೂಲವಾಗುವ ಉಪಕರಣಗಳು ಸ್ವ ಉದ್ಯೋಗ ಸೌರ ತಂತ್ರಜ್ಞಾನದ ಅನುಷ್ಠಾನ ಮತ್ತು ಅವಿಷ್ಕಾರ ವಿಶೇಷ ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. 

ಕೆನರಾ ಬ್ಯಾಂಕ್‌ ಆರ್ಥಿಕ ವಿಭಾಗದಿಂದ ಈರೇಶ ಡಂಗಿ ಮಾತನಾಡಿ, ಪ್ರತಿಯೊಬ್ಬರಿಗೆ ಅರ್ಥಿಕ ಸಾಕ್ಷರತೆಯ ಬಗ್ಗೆ ಅರಿವು ಮೂಡಿಸಿ ಸೈಬರ್ ವಂಚನೆ ಹಾಗೂ ಬ್ಯಾಂಕಿನಲ್ಲಿರುವ ವಿಶೇಷ ಇನ್‌ಶೂರೆನ್ಸ್‌ಗಳ ಬಗ್ಗೆ ಮಾಹಿತಿ ನೀಡಿದರು.

ADVERTISEMENT

ಭರತೇಶ ಉಪಾಧ್ಯಾಯ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹಣಕಾಸಿನ ವ್ಯವಹಾರ ಮಾಡಿ ಬ್ಯಾಂಕಿನಲ್ಲಿ ಸಿಗುವ ಯೋಜನೆಗಳನ್ನು ಅಳವಡಿಕೆ ಮಾಡಿಕೊಂಡು ಸ್ವ ಉದ್ಯೋಗ ಮಾಡಿ, ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಸಬ್ಸಿಡಿ ಯೋಜನೆಗಳನ್ನು ಅಳವಡಿಕೆ ಮಾಡಿ ಉದ್ಯೋಗ ಮಾಡಲು ಕರೆ ನೀಡಿದರು. 

ದೀಪಾಲಯ ಸಂಸ್ಥೆಯ ಹಿಲಾರಿಯ ಮಾತನಾಡಿರು. ದೀಪಾಲಯ ಕಾರ್ಯಕರ್ತರು, ನರೇಗಾ ಕೆಲಸಗಾರರು, ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.