ADVERTISEMENT

ಮುದ್ದೇಬಿಹಾಳ: ಕೆಬಿಜಿಎನ್‌ಎಲ್‌ ಎಡದಂಡೆ ಕಾಲುವೆಗೆ ಬಿದ್ದು ಮೂವರು ನಾಪತ್ತೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 11:21 IST
Last Updated 11 ನವೆಂಬರ್ 2025, 11:21 IST
   

ಮುದ್ದೇಬಿಹಾಳ: ತಾಲ್ಲೂಕಿನ ಶಿರೋಳ ಗ್ರಾಮದ ಸಮೀಪದಲ್ಲಿ ಕೆಬಿಜಿಎನ್‌ಎಲ್‌ ಎಡದಂಡೆ ಕಾಲುವೆಯಲ್ಲಿ ಮಂಗಳವಾರ ಒಬ್ಬ ಯುವತಿ, ಇಬ್ಬರು ಬಾಲಕರು ಸೇರಿದಂತೆ ಮೂವರು ಕಾಲು ಜಾರಿ ಬಿದ್ದಿದ್ದು, ಅಗ್ನಿಶಾಮಕ ಠಾಣೆ ಹಾಗೂ ಪೊಲೀಸರು ಶೋಧ ನಡೆಸಿದ್ದಾರೆ.

ಮುದ್ದೇಬಿಹಾಳ ಪಟ್ಟಣದ ಆಶ್ರಯ ಕಾಲೊನಿಯ ಸುಡಗಾಡ ಸಿದ್ಧ ಸಮಾಜಕ್ಕೆ ಸೇರಿದ ಬಸಮ್ಮ ಚೆನ್ನಪ್ಪ ಕೊಣ್ಣೂರ(21), ಸಂತೋಷ ಚೆನ್ನಪ್ಪ ಕೊಣ್ಣೂರ(16), ಹಾಗೂ ರವಿ ಹಣಮಂತ ಕೊಣ್ಣೂರ (15) ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಸಿಪಿಐ ಮೊಹಮ್ಮದ್‌ ಫಸಿವುದ್ದೀನ್‌, ಪಿಎಸ್ಐ ಸಂಜಯ ತಿಪರೆಡ್ಡಿ ಭೇಟಿ ನೀಡಿ, ಪರಿಶೀಲಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.