ADVERTISEMENT

ಮುದ್ದೇಬಿಹಾಳ: ಸಾಮಾಜಿಕ, ಆರ್ಥಿಕ ಸಮೀಕ್ಷೆಗೆ ಹಲವು ವಿಘ್ನ

ಸ್ಥಳೀಯ ಗ್ರಾಮ ಬಿಟ್ಟು ಅನ್ಯ ಸ್ಥಳಕ್ಕೆ ನಿಯೋಜನೆಗೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 3:04 IST
Last Updated 25 ಸೆಪ್ಟೆಂಬರ್ 2025, 3:04 IST
ಫೋಟೋ:24-ಎಂ.ಬಿ.ಎಲ್‌01 ಮುದ್ದೇಬಿಹಾಳ ಪಟ್ದಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತೀರ್ಣಾಧಿಕಾರಿಗಳ ಕಚೇರಿಗೆ ಬುಧವಾರ ಭೇಟಿ ನೀಡಿದ್ದ ತಹಸೀಲ್ದಾರ್ ಕೀರ್ತಿ ಚಾಲಕ ಸಾಮಾಜಿ ಹಾಗೂ ಆರ್ಥಿಕ ಸಮೀಕ್ಷೆಗೆ ನಿಯೋಜಿಸಿದ ಸಮೀಕ್ಷೆದಾರರ ಸಮಸ್ಯೆ ಆಲಿಸಿದರು.
ಫೋಟೋ:24-ಎಂ.ಬಿ.ಎಲ್‌01 ಮುದ್ದೇಬಿಹಾಳ ಪಟ್ದಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತೀರ್ಣಾಧಿಕಾರಿಗಳ ಕಚೇರಿಗೆ ಬುಧವಾರ ಭೇಟಿ ನೀಡಿದ್ದ ತಹಸೀಲ್ದಾರ್ ಕೀರ್ತಿ ಚಾಲಕ ಸಾಮಾಜಿ ಹಾಗೂ ಆರ್ಥಿಕ ಸಮೀಕ್ಷೆಗೆ ನಿಯೋಜಿಸಿದ ಸಮೀಕ್ಷೆದಾರರ ಸಮಸ್ಯೆ ಆಲಿಸಿದರು.   

ಮುದ್ದೇಬಿಹಾಳ: ತಾವು ಸೇವೆ ಸಲ್ಲಿಸುತ್ತಿರುವ ಶಾಲೆಯ ವ್ಯಾಪ್ತಿಯ ಗ್ರಾಮಗಳನ್ನೇ ಸಮೀಕ್ಷೆಗೆ ಒಳಪಡಿಸುವುದಾಗಿ ತಿಳಿಸಿ 30-40 ಕಿ.ಮೀ ದೂರದ ಗ್ರಾಮಗಳಿಗೆ ಸಮೀಕ್ಷೆ ನಡೆಸಲು ನಿಯೋಜನೆ ಮಾಡಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ಸಾಮಾಜಿಕ,ಆರ್ಥಿಕ ಸಮೀಕ್ಷೆಗೆ ನಿಯೋಜನೆಯಾಗಿರುವ ಕೆಲವು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.

ಪಟ್ಟಣದ ವಿದ್ಯಾನಗರದಲ್ಲಿರುವ ಬಿಸಿಎಂ ಕಚೇರಿಯ ಆವರಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಕರು ಸಮೀಕ್ಷೆಗೆ ಮುಂದಾಗುವ ವೇಳೆ ಎದುರಿಸುತ್ತಿರುವ ಸಮಸ್ಯೆ ಕುರಿತು ಮಾಹಿತಿ ನೀಡಿದರು. ದೇವೂರ ಎಚ್.ಪಿ.ಎಸ್ ಶಾಲೆ ಶಿಕ್ಷಕ ಬಸವರಾಜ ಕಲ್ಲಪ್ಪನವರ ಮಾತನಾಡಿ, ‘ನಮಗೆ ಸೆ.16 ,18 ರಂದು ತರಬೇತಿ ನೀಡಿದ್ದಾರೆ.ಕೆಲಸ ಮಾಡುವ ಶಾಲೆಯ ವ್ಯಾಪ್ತಿಯಲ್ಲಿ ಕೆಲಸ ಮಾಡಲು ನಿಯೋಜಿಸುವುದಾಗಿ ತಿಳಿಸಿದ್ದರು. ಆದರೆ ಬೇರೊಂದು ಊರಿಗೆ ನಿಯೋಜನೆ ಮಾಡಿದ್ದಾರೆ. ಮಹಿಳಾ ಶಿಕ್ಷಕರು, ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರು ಇದ್ದು ಅವರು ಹೋಗುವುದಕ್ಕೆ ತೊಂದರೆ ಆಗುತ್ತದೆ. ಸಮೀಕ್ಷೆ ಮಾಡಲು ನಾವು ಯಾರು ನಿರಾಕರಣೆ ಮಾಡಿಲ್ಲ’ ಎಂದರು.

‘ಒಬ್ಬ ಶಿಕ್ಷಕನಿಗೆ ಮೂರು ಊರುಗಳನ್ನು ಹಂಚಿಕೆ ಮಾಡಿದ್ದಾರೆ, 120 -150 ಮನೆಗಳನ್ನು ನೀಡುವುದಾಗಿ ಹೇಳಿದ್ದರು.ಆದರೆ ವಾಸ್ತವದಲ್ಲಿ 240-250ಮನೆಗಳನ್ನು ಹಂಚಿಕೆ ಮಾಡಿದ್ದಾರೆ. ಕೆಲವೊಬ್ಬರಿಗೆ ಸಮೀಕ್ಷೆ ನಡೆಸಲು ಒಂದೇ ಮನೆ ಹಂಚಿಕೆ ಮಾಡಿದ್ದಾರೆ. ಅಧಿಕಾರಿಗಳು ಅರ್ಜಿ ಕೊಟ್ಟರೂ ಸರಿಯಾದ ಮಾಹಿತಿ ನೀಡುತ್ತಿಲ್ಲ. ಸೂಪರವೈಸರಗಳೇ ಯಾರು ಎಂಬುದು ನಮಗೆ ಗೊತ್ತಿಲ್ಲ’ ಎಂದು ದೂರಿದರು.

ADVERTISEMENT

ಸೂಪರವೈಸರ್ ಟಿ.ಎನ್.ರೂಢಗಿ, ರೂಢಗಿ ತಾಂಡಾ ಶಾಲೆಯ ಶಿಕ್ಷಕ ಎಂ.ಎಸ್.ದೊಡಮನಿ ಮಾತನಾಡಿ, ಕಣ್ಣು ಕಾಣದ ಶಿಕ್ಷಕರನ್ನು ಸಮೀಕ್ಷೆಗೆ ಹಾಕಿದ್ದಾರೆ. 55-58 ವರ್ಷದ ಶಿಕ್ಷಕರನ್ನು ಸಮೀಕ್ಷೆಗೆ ನಿಯೋಜನೆ ಮಾಡಿದ್ದಾರೆ ಎಂದರು.

ಸರೂರ ಎಲ್.ಪಿ.ಎಸ್‌ನ ಶಿಕ್ಷಕಿ ಮಹಾಲಕ್ಷ್ಮಿ ಭೋವಿ ಮಾತನಾಡಿ, ಸರೂರು ಗುಡ್ಡದ ಶಾಲೆಯಲ್ಲಿ ಐವರು ಮಹಿಳಾ ಶಿಕ್ಷಕರಿದ್ದು ಒಬ್ಬರನ್ನೇ ಕವಡಿಮಟ್ಟಿ ಗ್ರಾಮಕ್ಕೆ ಹಾಕಿದ್ದಾರೆ. ಇನ್ನುಳಿದ ನಾಲ್ವರನ್ನು ಮುದ್ದೇಬಿಹಾಳಕ್ಕೆ ನಿಯೋಜಿಸಿದ್ದಾರೆ. ಕಿಟ್ ತೆಗೆದುಕೊಂಡವರಿಗೆ ಆಪ್ ಡೌನಲೋಡ್ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. 15 ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸುವುದು ಸಾಧ್ಯವಾಗುವುದಿಲ್ಲ.ನಾವು ಕಲಿಸುವ ಪ್ರದೇಶದಲ್ಲಿ ಸಮೀಕ್ಷೆ ಹಾಕಿದರೆ ಸುಲಭವಾಗಿ ಸಮೀಕ್ಷೆ ಮಾಡಲು ಸಾಧ್ಯವಾಗುತ್ತದೆ ಎಂದರು.

ರೂಢಗಿ ಎಲ್.ಟಿ ಶಿಕ್ಷಕಿ ಪ್ರಭಾವತಿ ಬೊಮ್ಮಣಗಿ ಮಾತನಾಡಿ, ಆ್ಯಪ್‌ ವರ್ಕ ಆಗುತ್ತಿಲ್ಲ ಎಂದರು.
ಬೆಳಗ್ಗೆ 11.30ರವರೆಗೂ ಶಿಕ್ಷಕರು ಬಿಸಿಎಂ ಕಚೇರಿಯ ಮುಂಭಾಗದಲ್ಲಿಯೇ ಇದ್ದರು. ಸಮೀಕ್ಷೆಗೆ ತೆರಳಬೇಕಾದವರಿಗೆ ಸರಿಯಾಗ ಮಾರ್ಗದರ್ಶನ ಸಿಕ್ಕಿಲ್ಲ ಎಂಬ ಆರೋಪಗಳು ಶಿಕ್ಷಕರ ವಲಯದಿಂದ ಕೇಳಿ ಬಂದವು.

ಒಬ್ಬ ಶಿಕ್ಷಕರಿಗೆ 120 ನಿಗದಿ ಮಾಡಿದ್ದೇವೆ. ಹಳ್ಳಿಗಳ ವ್ಯಾಪ್ತಿ ದೊಡ್ಡದಿದ್ದಾಗ 150 ಮನೆಗಳನ್ನು ಹಂಚಿಕೆ ಆಗಿದೆ. ಆದರೆ ಯಾವುದೇ ಶಿಕ್ಷಕರಿದ್ದರೂ ಅವರಿಗೆ 120ಕ್ಕಿಂತ ಹೆಚ್ಚು ಮನೆಗಳನ್ನು ಹಂಚಿಕೆ ಮಾಡುವುದಿಲ್ಲ. ತಾಂತ್ರಿಕ ತೊಂದರೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸುತ್ತೇವೆ. ಗರ್ಭಿಣಿಯರು,ವಯೋವೃದ್ಧರನ್ನು ಸಮೀಕ್ಷೆಗೆ ನಿಯೋಜನೆ ಮಾಡಿಲ್ಲ.
ಕೀರ್ತಿ ಚಾಲಕ, ತಹಶೀಲ್ದಾರ್‌
ತಾಂತ್ರಿಕ ತೊಂದರೆಗಳನ್ನು ಸರಿಪಡಿಸಿ ಶಿಕ್ಷಕರಿಗೆ ಆಯಾ ಕರ್ತವ್ಯದ ಶಾಲೆಯಿರುವ ಊರುಗಳಲ್ಲಿ ಸಮೀಕ್ಷೆ ನಡೆಸಲು ನಿಯೋಜನೆ ಮಾಡಬೇಕು ಎಂದು ಶಿಕ್ಷಕರ ಸಂಘದಿಂದ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.  ಸೂಪರವೈಸರಗಳಿಗೆ ಸಮೀಕ್ಷೆದಾರರ ಪಟ್ಟಿ ಕೊಟ್ಟಿದ್ದಾರೆ.ಆದರೆ ಸಮೀಕ್ಷೆದಾರರಿಗೆ ಮನೆಗಳ ಪಟ್ಟಿ ಕೊಟ್ಟಿಲ್ಲ.
-ಎನ್.ಎಸ್.ತುರುಡಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ
ಫೋಟೋ:24-ಎಂ.ಬಿ.ಎಲ್‌01ಎ ಮುದ್ದೇಬಿಹಾಳ ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ ಮುಂದೆ ಬುಧವಾರ ಬೆಳಗ್ಗೆ 11.30ರವರೆಗೂ ಜಮಾಯಿಸಿದ್ದ ಸಮೀಕ್ಷೆದಾರರು ಸಮೀಕ್ಷೆ ಸಮಯದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಬಿಚ್ಚಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.