ಮುದ್ದೇಬಿಹಾಳ : ಸಾರ್ವಜನಿಕರ ಬೇಡಿಕೆಯೆ ಮೇರೆಗೆ ಶಾಸಕ ಸಿ.ಎಸ್.ನಾಡಗೌಡ ಅವರ ಸೂಚಿಸಿದ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ನಗರದಲ್ಲಿ ಎರಡನೇ ಹಂತದ ಸಿಟಿ ಬಸ್ ಸಂಚಾರ ಗುರುವಾರದಿಂದ ಆರಂಭಗೊಂಡಿದೆ.
ಪಟ್ಟಣದ ಮಹೆಬೂಬ ನಗರದ ಉರ್ದು ಶಾಲೆಯ ಮುಂಭಾಗದಲ್ಲಿ ರಿಬ್ಬನ್ ಕತ್ತರಿಸಿ ನಗರ ಸಾರಿಗೆಗೆ ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಚಾಲನೆ ನೀಡಿದರು.
ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿ, ನಗರದ ಜನತೆಗೆ ಸಿಟಿ ಬಸ್‌ಗಳು ಒಳ್ಳೆಯ ಅನುಕೂಲ ಕಲ್ಪಿಸಿವೆ ಎಂದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯ್ಕಮಕ್ಕಳ, ಕೆಯುಸಿ ಬ್ಯಾಂಕ್ ನಿರ್ದೇಶಕ ಶ್ರೀಶೈಲ ಪೂಜಾರಿ, ಗ್ಯಾರಂಟಿ ಸಮಿತಿ ಸದಸ್ಯ ಸಂಗಣ್ಣ ಮೇಲಿನಮನಿ, ಅಲ್ಲಾಭಕ್ಷ ಟಕ್ಕಳಕಿ, ಸಾಹೇಬಲಾಲ ದೇಸಾಯಿ, ಹುಸೇನ ಮುಲ್ಲಾ, ಗೋಪಿ ಮಡಿವಾಳರ, ಹುಸೇನಭಾಷಾ ಹುಣಸಗಿ, ಜಬ್ಬಾರ ಗೋಲಂದಾಜ, ರೋಷನ ಬೇಗ್, ಚಾಲಕ ಶೆಟ್ಟೆಪ್ಪ ಕಡಿ, ಕಂಟ್ರೋಲರ್ ಹಬೀಬ ಹಡಗಲಿ, ನಿರ್ವಾಹಕ ಅಮೋಘಸಿದ್ದ ಹಾದಿಮನಿ ಇದ್ದರು.
ಬಸ್ ಸಮಯ: ಬೆಳಗ್ಗೆ 7 ಗಂಟೆಯಿಂದ ನಾಲತವಾಡ ರಸ್ತೆಯ ಉರ್ದು ಶಾಲೆಯಿಂದ ಆರಂಭಗೊಳ್ಳುವ ನಗರ ಸಾರಿಗೆ ಸಂಚಾರ ಅರ್ಧ ಗಂಟೆಗೊಮ್ಮೆ ಬಿದರಕುಂದಿ ಗ್ರಾಮದವರೆಗಿನ ಕ್ರಾಸ್‌ವರೆಗೂ ಸಂಚರಿಸಲಿದೆ ಎಂದು ಸಾರಿಗೆ ಘಟಕದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.