ಇಂಡಿ: ‘ನನ್ನ ಬೆಳೆ ನನ್ನ ಸಮೀಕ್ಷೆ’ ಯೋಜನೆ ರೈತರಿಗೆ ಸಹಕಾರಿಯಾಗಲಿದೆ ಎಂದು ಕೃಷಿ ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ ಪವಾರ ಹೇಳಿದರು.
ಪಟ್ಟಣದ ಸಾತಪುರ ಗ್ರಾಮದಲ್ಲಿ ನಿಂಗಪ್ಪ ರೂಗಿ ಅವರ ಹೊಲದಲ್ಲಿ ರೈತರಿಗೆ ಯೋಜನೆ ಕುರಿತು ಮಾಹಿತಿ ನೀಡಿ ಮಾತನಾಡಿದರು.
ರೈತರು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಮೊಬೈಲ್‌ನಲ್ಲಿ ಅಪ್‌ಲೋಡ್ ಮಾಡುಬೇಕು. ಇದರಿಂದ ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ ಮತ್ತು ಸರ್ಕಾರದ ವಿವಿಧ ಯೋಜನೆಗಳಡಿ ಸೌಲಭ್ಯ ಒದಗಿಸಲು ಹಾಗೂ ಪಹಣಿಯಲ್ಲಿ ಬೆಳೆ ಮಾಹಿತಿ ಅಳವಡಿಸಲು ಉಪಯೋಗವಾಗಲಿದೆ ಎಂದರು.
ರೈತರಾದ ನೀಲಪ್ಪ ಗುಡ್ಲ, ಕಾಳಪ್ಪ ರೂಗಿ, ನಿಂಗಪ್ಪ ಮಾವಿನಹಳ್ಳಿ, ಮಾಳಪ್ಪ ಗುಡ್ಲ, ರಾವತಪ್ಪ ಬೇವನೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.