ADVERTISEMENT

ನಾಲತವಾಡ | ಗ್ರಾಹಕರ ಸಮಿತಿಗಳ ಸಹಕಾರ ಅಗತ್ಯ: ಆರ್.ಎನ್. ಹಾದಿಮನಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 15:18 IST
Last Updated 2 ಜುಲೈ 2025, 15:18 IST
ನಾಲತವಾಡ ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ಬುಧವಾರ ನಡೆದ ಗ್ರಾಹಕರ ಸಲಹಾ ಸಮಿತಿಯ ಸಭೆಯಲ್ಲಿ ಅಧ್ಯಕ್ಷರು ಸೇರಿದಂತೆ ಸದಸ್ಯರನ್ನು ಸನ್ಮಾನಿಸಲಾಯಿತು
ನಾಲತವಾಡ ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ಬುಧವಾರ ನಡೆದ ಗ್ರಾಹಕರ ಸಲಹಾ ಸಮಿತಿಯ ಸಭೆಯಲ್ಲಿ ಅಧ್ಯಕ್ಷರು ಸೇರಿದಂತೆ ಸದಸ್ಯರನ್ನು ಸನ್ಮಾನಿಸಲಾಯಿತು   

ನಾಲತವಾಡ: ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಗುಣಮಟ್ಟದ ವಿದ್ಯುತ್ ಪೂರೈಸುವಲ್ಲಿ ಗ್ರಾಹಕರ ಸಲಹಾ ಸಮಿತಿಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೆಸ್ಕಾಂ ಸಹಾಯಕ ಎಕ್ಸಿಕ್ಯುಟಿವ್‌ ಎಂಜಿನಿಯರ್‌ ಆರ್.ಎನ್. ಹಾದಿಮನಿ ಹೇಳಿದರು.

ಪಟ್ಟಣದ ಹೆಸ್ಕಾಂ ಶಾಖೆಯಲ್ಲಿ ಬುಧವಾರ ಬೆಳಿಗ್ಗೆ ನಡೆದ ಗ್ರಾಹಕ ಸಲಹಾ ಸಮಿತಿ ಸಭೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಹಿಂದೆ ಕೇವಲ ಶಾಖಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗುತ್ತಿತ್ತು. ಆದರೆ ಈ ಬಾರಿ ಶಾಖೆಗೆ ಒಳಪಟ್ಟ ಪ್ರತಿಯೊಂದು ಗ್ರಾಮದಿಂದ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ಇದು ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಸ್ಪಂದನೆ ನೀಡಲು ಸಹಕಾರಿಯಾಗಲಿದೆ ಎಂದರು.

ADVERTISEMENT

ಬಲದಿನ್ನಿ ಹಾಗೂ ಸಿದ್ದಾಪೂರ ಗ್ರಾಮಗಳಲ್ಲಿ 110 ಕೆವಿ ವಿದ್ಯುತ್ ಉಪಕೇಂದ್ರಗಳನ್ನು ಮಂಜೂರಾಗಿವೆ. ಮುಂದಿನ ಎರಡು ವರ್ಷಗಳಲ್ಲಿ ಈ ಕಾಮಗಾರಿಗಳು ಪೂರ್ಣಗೊಳ್ಳಲಿದ್ದು, ಗುಣಮಟ್ಟದ ವಿದ್ಯುತ್ ಪೂರೈಕೆಗಾಗಿ ಇದು ಮಹತ್ವದ ಹೆಜ್ಜೆಯಾಗಲಿದೆಎಂದು ಅವರು ತಿಳಿಸಿದರು.

ರೈತರ ಗ್ರಾಹಕ ಉಮೇಶ ಹಾವರಗಿ ಮಾತನಾಡಿದರು.

ಸನ್ಮಾನ: ನೂತನ ಗ್ರಾಹಕರ ಸಲಹಾ ಸಮಿತಿಗೆ ರೈತ ಪ್ರತಿನಿಧಿಯಾಗಿ ಮಲ್ಲಣ್ಣ ಸಿದರೆಡ್ಡಿ, ರಶೀದ ಮುಲ್ಲಾ, ಪರಿಶಿಷ್ಟ ಜಾತಿ ಪ್ರತಿನಿಧಿಯಾಗಿ ಕಮಲಾ ಭಜಂತ್ರಿ, ಮಹಿಳಾ ಪ್ರತಿನಿಧಿಯಾಗಿ ಕಸ್ತೂರಿಬಾಯಿ ಜವಳಗೇರಿ, ಅಲ್ಪಸಂಖ್ಯಾತರ ಪ್ರತಿನಿಧಿಯಾಗಿ ಜರೀನಾಬೇಗಂ ಮೂಲಿಮನಿ, ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿ ಮಹಾಂತೇಶ ಚಿತ್ರನಾಳ, ವಾಣಿಜ್ಯ ಪ್ರತಿನಿಧಿ ಅಶೋಕ ಇಲಕಲ್, ಸಮಿತಿ ಅಧ್ಯಕ್ಷರಾದ ಸಹಾಯಕ ಎಕ್ಸಿಕ್ಯುಟಿವ್‌ ಎಂಜಿನಿಯರ್‌ ಆರ್,ಎನ್.ಹಾದಿಮನಿ, ಸಹಾಯಕ ಎಂಜಿನಿಯರ್, ನಾಗರಾಜ ಬಸರಕೋಡ, ಜೂನಿಯರ್ ಎಂಜಿನಿಯರ್ ಆರ್.ಬಿ.ಹಿರೇಮಠ, ಪ.ಪಂ ಸದಸ್ಯರಾದ ಸಂಗಣ್ಣ ಬಾರಡ್ಡಿ ಅವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದ ನಿರೂಪಣೆಯನ್ನು ಮಡಿಕೇಶ್ವರದ ಶಾಖಾಧಿಕಾರಿ ಭೀಮಣ್ಣ ಯರಗೊಡ ಮಾಡಿದರು.
ಈ ವೇಳೆ ನಾಲತವಾಡ ಹೆಸ್ಕಾಂ ಶಾಖಾಧಿಕಾರಿ ಎಮ್.ಕೆ.ಜಾಗಿರದಾರ, ಜೆಇ ರಮೇಶ ನಾಯಕ, ಮೇಲ್ವಿಚಾರಕ ಎಮ್.ಕೆ.ಸಜ್ಜನ, ಅಲ್ತಾಫ ಕಿತ್ತೂರ ಸೇರಿದಂತೆ ಸಿಬ್ಬಂದಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.