ADVERTISEMENT

ಹಾಲು ಉತ್ಪಾದನೆ, ಭಾರತ ಮೊದಲು: ಸಂಜೀವ್ ದಿಕ್ಷೀತ್

ವಿಜಯಪುರ–ಬಾಗಲಕೋಟೆ ಜಿಲ್ಲಾ ಹಾಲು ಒಕ್ಕೂಟದಿಂದ ರಾಷ್ಟ್ರೀಯ ಹಾಲು ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 12:47 IST
Last Updated 26 ನವೆಂಬರ್ 2020, 12:47 IST
ವಿಜಯಪುರ–ಬಾಗಲಕೋಟೆ ಜಿಲ್ಲಾ ಹಾಲು ಒಕ್ಕೂಟದಿಂದ ಡಾ. ವರ್ಗೀಸ್ ಕುರಿಯನ್‍ ಜಯಂತಿ ಅಂಗವಾಗಿ  ರಾಷ್ಟ್ರೀಯ ಹಾಲು ದಿನ ಆಚರಿಸಲಾಯಿತು
ವಿಜಯಪುರ–ಬಾಗಲಕೋಟೆ ಜಿಲ್ಲಾ ಹಾಲು ಒಕ್ಕೂಟದಿಂದ ಡಾ. ವರ್ಗೀಸ್ ಕುರಿಯನ್‍ ಜಯಂತಿ ಅಂಗವಾಗಿ  ರಾಷ್ಟ್ರೀಯ ಹಾಲು ದಿನ ಆಚರಿಸಲಾಯಿತು   

ವಿಜಯಪುರ: ಡಾ.ವರ್ಗಿಸ್ ಕುರಿಯನ್‍ ಅವರು ಸಹಕಾರಿ ಹೈನುಗಾರಿಕೆಗೆ ನೀಡಿದ ಕೊಡುಗೆ ಅನನ್ಯವಾಗಿದ್ದು, ಅವರ ಮಾರ್ಗದರ್ಶನದಲ್ಲಿ ದೇಶವು ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲಿ ಮೊದಲನೆ ಸ್ಥಾನದಲ್ಲಿದೆ ಎಂದು ವಿಜಯಪುರ–ಬಾಗಲಕೋಟೆ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ದಿಕ್ಷೀತ್‌ ಹೇಳಿದರು.

ಡಾ. ವರ್ಗೀಸ್ ಕುರಿಯನ್‍ ಜಯಂತಿ ಅಂಗವಾಗಿ ಒಕ್ಕೂಟದ ಆವರಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಹಾಲು ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಕುರಿಯನ್‍ ಕಾರಣದಿಂದ ಸಹಕಾರಿ ರಂಗದಲ್ಲಿ ಅಮೂಲ್, ನಂದಿನಿ ಬ್ರಾಂಡ್‍ಗಳು ಜಗದ್ವಿಖ್ಯಾತವಾಗಿದ್ದು, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳು ದೊರೆಯುವಂತಾಗಿದೆ ಎಂದರು.

ADVERTISEMENT

ಕುರಿಯನ್ ಅವರಿಗೆ ಖಾಸಗಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಅವಕಾಶವಿದ್ದರೂ ವೈಯುಕ್ತಿಕ ಹಿತಾಸಕ್ತಿಯನ್ನು ಬದಿಗೊತ್ತಿ ಬಡ ಹಿಂದುಳಿದ ಹಾಲು ಉತ್ಪಾದಕರ ಏಳಿಗೆಗಾಗಿ ಸಹಕಾರ ರಂಗವನ್ನು ಆಯ್ಕೆ ಮಾಡಿಕೊಂಡು ಹಗಲಿರುಳು ಶ್ರಮಿಸಿದರು ಎಂದು ಹೇಳಿದರು.

ಒಕ್ಕೂಟದ ಪ್ರಭಾರ ವ್ಯವಸ್ಥಾಪಕ ಡಾ.ಸದಾಶಿವ ಹಾದಿಮನಿ, ಎಸ್.ಎಸ್.ಕುಂಬಾರ, ಉಪ ವ್ಯವಸ್ಥಾಪಕರಾದ ಡಾ.ಅರವಿಂದ ಕುಂಬಾರ, ಬಿ.ಎಸ್.ತೆಗ್ಗಿ, ಮೋಹನ್ ಶಿಂಧೆ, ವಿ.ಆರ್.ಯಡಹಳ್ಳಿ, ಸಹಾಯಕ ವ್ಯವಸ್ಥಾಪಕ ಕೆ.ನಾಗೇಂದ್ರ, ಹೇಮಂತ ಬಂಕಾಪುರ, ಜಹಗೀರದಾರ, ಗೋಪಾಲ ಚಾಟೆ, ಎಂ.ವಿ.ಕಟ್ಟಿ, ಕಿರಣ ದೇಸಾಯಿ, ರಾಘವೆಂದ್ರ ಯರಗಲ್, ಡಿ.ಆರ್.ಸೋಮಶೇಖರ್,ಡೇರಿ ಅಧಿಕಾರಿ ತುಕಾರಾಮ್, ವಿಕ್ರಮ್, ಎಂಜಿನಿಯರ್‌ ರೂಪಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.